ಸರ್ಕಾರದ ನಿಯಮ ಉಲ್ಲಂಘಿಸಲು ಸಾಧ್ಯವಿಲ್ಲ: ಕಣ್ಣೂರಿನ ಬಿಜೆಪಿ ಮುಖಂಡರಿಗೆ ಕೆಜಿಬಿ ಪ್ರತ್ಯುತ್ತರ

ಕೋವಿಡ್ ನಿಂದ ರಾಜ್ಯ ಸರ್ಕಾರ ಅಂತರರಾಜ್ಯ ಗಡಿ ನಿರ್ಭಂದ ಹೇರಿರುವ ಬೆನ್ನಲ್ಲೇ ಕೊಡಗು ಕೇರಳ ಗಡಿಯಲ್ಲಿ ಸಾಕಷ್ಟು ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಕೇರಳದ ಕಣ್ಣೂರಿನ ಬಿಜೆಪಿ ಮುಖಂಡರು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯರನ್ನು ಭೇಟಿ ಮಾಡಿದ್ದಾರೆ.

ಕಣ್ಣೂರು ಬಿಜೆಪಿ ಅಧ್ಯಕ್ಷ ಹರಿದಾಸ್ ನೇತೃತ್ವದ ತಂಡ ಮಾಕುಟ್ಟ ಗಡಿ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಗಿಲಾಗಿದ್ದು, ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಸಗಟುದಾರರು ಎರಡು ಲಸಿಕೆ ಪಡೆದರು ಆರ್.ಟಿ.ಪಿ.ಸಿ.ಆರ್ ವರದಿ ಅಗತ್ಯ ಇರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಉಲ್ಲೇಖಿಸಿ ಮನವಿ ಮಾಡಿದ್ದಾರೆ.ಮನವಿ ಸ್ವಿಕರಿಸಿ ಪ್ರತಿಕ್ರಿಯೆ ನೀಡಿದ ಶಾಸಕ ಕೆ.ಜಿ ಬೋಪ್ಪಯ್ಯ ಕೋವಿಡ್ ನಿಯಂತ್ರಣಕ್ಕೆ ಬಾರದೆ ಗಡಿಯಲ್ಲಿ ಸರ್ಕಾರದ ನಿಯಮವನ್ನೇ ಪಾಲಿಸಲಾಗುವುದೆಂದರು.