ಸರ್ಕಾರದಿಂದ ಮನೆ ಸಿಕ್ಕಿದೆ,ಕುಡಿಯಲುನೀರು,ಶೌಚಾಲಯ ವ್ಯವಸ್ಥೆಯಿಲ್ಲದೆ ನಿರಾಶ್ರಿತರ ಪರದಾಟ

ಕೊಡಗು: ಭೂಕುಸಿತದಿಂದ ಜಿಲ್ಲೆಯಲ್ಲಿ 2018ರಲ್ಲಿ ಮನೆ ಕಳೆದುಕೊಂಡವರಿಗೆ ಸೂರು ಏನೋ ಸಿಕ್ಕಿದೆ,ಆದರೆ ಇಲ್ಲಿಗೆ ಕುಡಿಯುವ ನೀರಿನ ವ್ಯವಸ್ಥೆಯೇ ಸರಿಯಿಲ್ಲ.

ಹೌದು ಇದು ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ ದಿನನಿತ್ಯ ಇಲ್ಲಿನ ವಾಸಿಗಳು ಎದುರುಸುತ್ತಿರವ ಪರಿಸ್ಥಿತಿ. 2020ರಲ್ಲಿ 383 ಕುಟುಂಬಗಳಿಗೆ ಮನೆಯ ಭಾಗ್ಯ ಮಂಜೂರು ಮಾಡಲಾಗಿದ್ದು,ಮನೆಗಳು ನೋಡುವುದಕ್ಕೆ ಅಚ್ಚುಕಟ್ಟಾಗಿದ್ದು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಕುಡಿಯ5ವ ನೀರು ಪ್ರಮುಖವಾದರೆ,ತ್ಯಾಜ್ಯ ಮತ್ತು ಮಳೆ ನೀರು ಹರಿಯಲು ಚರಂಡಿಯ ಸೂಕ್ತ ವ್ಯವಸ್ಥೆಯಿಲ್ಲದೆ ವಾಸಿಗಳು ಪರಿತಪಿಸುತ್ತಿದ್ದಾರೆ,ಇದರ ಪರಿಣಾಮ ತ್ಯಾಜ್ಯ ನೀರು ಫೀಲ್ಡ್. ಮಾರ್ಷಲ್ ಕಾರ್ಯಪ್ಪ ಮೈಧಾನದಲ್ಲಿ ನಿಂತು ಸೂಳ್ಳೆಗಳ ಮನೆಯಾಗಿದೆ.ಕುಡಿಯುವ ನೀರು ಒಂದು ಮನೆಗೆ ಸಾಕಾಗುವಷ್ಟು ಸಿಗದಿಲ್ಲದ ಕಾರಣ ಪಂಚಾಯ್ತಿ ಅಷ್ಟೂ ಕುಟುಂಬಳಿಗೆ ಒಂದೆರೆಡು ಟ್ಯಾಂಕರ್ ಮೂಲಕ ಪೂರೈಸುತ್ತಿದೆ.ಆದರೆ ಇದು ಎಲ್ಲರಿಗೂ ತಲುಪದಿರುವ ಕಾರಣ ನೆಂಟರಿಷ್ಟರ ಮನೆಗಳಿಂದ ವಾಹನಗಳ ಮೂಲಕ ತರಿಸೌಕೊಳ್ಳುತ್ತಿದ್ದಾರೆ.ಇನ್ನು ಇಲ್ಲಿ ನಿರ್ಮಿಸಿರುವ ಬೋರ್ ವೆಲ್ ಕೆಟ್ಟು ನಿಂತಿದ್ದು ಮೋಟಾರ್ ನಿರ್ವಹಿಸಲು ಪರದಾಡುತ್ತಿದ್ದಾರಗ.

ಇದನ್ನು ಅರಿತು ಕೆಲವು ಯುವಕರು ಡ್ರಮ್ ಗಳಲ್ಲಿ ನೀರು ಪೂರೈಸುತ್ತಿದ್ದರೆ,ಇತ್ತ ಶೌಚಗುಂಡಿ ತುಂಬಿ ಗಬ್ಬುನಾರುತಾತಿರುವ ಬಗ್ಗೆ ಗಮನ ಹರಿಸುವುದು ಯಾರು,ಸರಕಾರದಿಂದ ನಿರ್ಮಿಸಿಕೊಟ್ಟಿರುವ ಮನೆಗಳು ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದು,ಮಾಜಿ ಸಿ.ಎಂ ಕುಮಾರಸ್ವಾಮಿ ಮಾಡಿದ್ದು ಎಂದು ಪ್ರತಿಷ್ಟೆಗೆ ಉದ್ಗೋಟನೆ ಸಂದರ್ಭ ಹೋರಾಟ ನಡೆಸಿದವರು,ಇದೀಗ ಎಲ್ಲಿ ಹೋದರು ಹೋರಾಟಗಾರರು ಎಂಬುವುದೇ ಪ್ರಶ್ನೆ..

error: Content is protected !!