ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಸಿದ್ಧಗೊಂಡಿದೆ ಸುಸಜ್ಜಿತ ಮೈದಾನ!

ಲಡಾಖ್: ಲಡಾಖ್ ನ ಸ್ಪಿಟುಕ್ ನಲ್ಲಿ ಅತ್ಯಾಧುನಿಕ ಸುಸಜ್ಜಿತ ಫುಟ್ಬಾಲ್ ಮೈದಾನವನ್ನು ನಿರ್ಮಿಸಲಾಗುತ್ತಿದೆ. ಇದು ಭಾರತದ ಅತ್ಯಂತ ಎತ್ತರದ ಸಾಕರ್ ಮೈದಾನವಾಗಿದೆ. ಟ್ರ್ಯಾಕ್ ಮತ್ತು ಫೀಲ್ಡ್ ಇವೆಂಟ್ ಗಳಿಗಾಗಿ ಈ ಕ್ರೀಡಾಂಗಣವನ್ನು ಮರು ರೂಪಿಸಲಾಗುತ್ತಿದೆ.
ಇದು ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿದೆ. ಸದ್ಯ ಕ್ರೀಡಾಂಗಣದ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. 30,000 ಪ್ರೇಕ್ಷಕರು ಕುಳಿತುಕೊಳ್ಳಲು ಗ್ಯಾಲರಿಗಳನ್ನು ನಿರ್ಮಿಸಲಾಗುತ್ತಿದೆ. ಕ್ರೀಡಾಂಗಣದ ಅಂದಾಜು ವೆಚ್ಚ ರೂ. 10.68 ಕೋಟಿ ಆಗಿದೆ.
ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಗಳ ಒಕ್ಕೂಟ(ಫಿಫಾ) ಕೂಡಾ ಲಡಾಖ್ ಫುಟ್ಬಾಲ್ ಮೈದಾನಕ್ಕೆ ಹಸಿರು ನಿಶಾನೆ ತೋರಿಸಿದೆ. ಕ್ರೀಡಾಂಗಣವನ್ನು ಟ್ರ್ಯಾಕ್ ಇವೆಂಟ್ ಗಳಿಗೆ ಬಳಸಲು 8 ಲೇನ್ ಗಳೊಂದಿಗೆ ಸಿಂಥೆಟಿಕ್ ಟ್ರ್ಯಾಕ್ ಗಳನ್ನು ಅಳವಡಿಸಲಾಗಿದೆ.