fbpx

ಸಮಾಜಸೇವಕ ಕೋಡಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣು

ಮಾಜಿ ನಗರಸಭೆ ಸದಸ್ಯ, ಕಾಂಗ್ರೆಸ್ ಮುಖಂಡ,ಸಮಾಜ ಸೇವಕ ಮಡಿಕೇರಿ ನಿವಾಸಿ ಕೋಡಿ ಚಂದ್ರ ಶೇಖರ್ ( 53)
ಮನೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ರಾಘವೇಂದ್ರ ನಗರದಲ್ಲಿನ ಮನೆಯಲ್ಲಿಯೇ ಒಂದು ನಳಿಕೆ ಬಂದೂಕಿನಿಂದ ತಮ್ಮ ಬೆಡ್ ರೂಂನಲ್ಲೇ ಗುಂಡು ಹಾರಿಸಿಕೂಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತ್ನಿಯ ಆಕ್ರಂದನ ಮುಗಿಲುಮುಟ್ಟಿದ್ದು, ಆಘಾತಕಾರಿ ಸುದ್ದಿ ಕೇಳಿ ಸ್ಥಳಕ್ಕೆ ಸಂಬಂಧಿಕರು, ಸ್ನೇಹಿತರು ದೌಡಾಯಿಸಿ ಮರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಡಿಕೇರಿ ಪಟ್ಟಣ ಪೊಲೀಸರು ಸ್ಥಳ ಮಂಜೂರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!