ಸಮಯ ಪ್ರಜ್ಞೆ ಮೆರೆದು ತಾಯಿಯನ್ನು ರಕ್ಷಿಸಿದ ಮಗ

ಸಾಂದರ್ಭಿಕ ಚಿತ್ರ
ತಲೆಯ ಕೂದಲು ಸಿಲುಕಿ ಗಿರಣಿಯ ಯಂತ್ರಕ್ಕೆ ಸಿಲುಕಿದ ತಾಯಿಯನ್ನು 8 ವರ್ಷದ ಮಗ ರಕ್ಷಿಸಿದ ಘಟನೆ ಶನಿವಾರಸಂತೆಯ ಬೆಸೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ತಮ್ಮ ಸ್ವಂತ ಹಿಟ್ಟಿನ ಗಿರಣಿಯಲ್ಲಿ ಗ್ರಾಹಕರ ನೀಡಿದ್ದ ಅಕ್ಕಿ ಹಿಟ್ಟು ಮಾಡುತ್ತಿದ್ದ ವೇಳೆ ಅರ್ಪಿತಾ ರವರ ಕೂದಲು ಗಿರಣಿಯ ಬೆಲ್ಟ್ ಗೆ ಸಿಲುಕಿಕೊಂಡಿದೆ. ಇದೇ ಸಂದರ್ಭ ಅಮ್ಮನ ಚೀರಾಟ ಕೇಳಿ ಓಡಿ ಬಂದ ಮಗ ದೀಕ್ಷಿತ್ ಸಮಯ ಪ್ರಜ್ಞೆಯಿಂದ ಎಂಜಿನ್ ಸ್ವಿಚ್ ಆಫ್ ಮಾಡಿ, ತಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾನೆ.
ದೀಕ್ಷಿತ್ ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದ.