fbpx

ಸದ್ಯದಲ್ಲೇ ತರೆಗೆ ಬರಲಿದೆ ‘ಕೆಜಿಎಫ್ 2’

ಕೊನೆಗೂ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಬಿಡುಗಡೆಗೆ ಮುಹೂರ್ತ ಬಂದಂತಿದೆ. ಮತ್ತೆ ಕೊರೊನಾ ವಕ್ಕರಿಸದೆ ಇದ್ದರೆ, ಏಪ್ರಿಲ್ 14ರಂದು ಚಿತ್ರ ತೆರೆಗೆ ಬರುವ ಸೂಚನೆಯನ್ನು ಅದರ ನಿರ್ಮಾಣ ಸಂಸ್ಥೆ ಹೊಂಬಾಳೆ ನೀಡಿದೆ. ಅದಕ್ಕಿಂತ ಮೊದಲು ಅದರ ಟ್ರೈಲರ್ ಇದೇ ತಿಂಗಳ 27ರಂದು ಬಿಡುಗಡೆ ಆಗಲಿದೆ.

2018ರ ಡಿಸೆಂಬರ್ 20ರಂದು ತೆರೆಕಂಡ, ಯಶ್ ಮುಖ್ಯಭೂಮಿಕೆಯ ಈ ಚಿತ್ರದ ಮೊದಲ ಭಾಗ, ಕನ್ನಡ ಚಿತ್ರರಂಗದತ್ತ ಇತರ ಭಾಷೆಗಳವರು ತಿರುಗಿನೋಡುವಂತೆ ಮಾಡಿತ್ತು.

ಏ.೧೪ರಂದು ವಿಶ್ವದಾದ್ಯಂತ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ಇದು ತೆರೆಕಾಣಲಿದೆ. ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆಯ ಮೂಲಕ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ಎರಡನೇ ಚಾಪ್ಟರ್‌ನಲ್ಲಿ ಸಂಜಯ್ ದತ್, ರವೀನಾ ಟಂಡನ್ ಮುಂತಾದವರಿದ್ದಾರೆ. ಮೊನ್ನೆ ವಿಶ್ವ ಮಹಿಳಾ ದಿನಾಚರಣೆಯ ದಿನ, ಆ ಚಿತ್ರದಲ್ಲಿ ಪಾಲ್ಗೊಂಡ ತಾರೆಯರ ಭಿತ್ತಿಪತ್ರವನ್ನು ಸಂಸ್ಥೆ ಹೊರತಂದಿತ್ತು.

error: Content is protected !!