ಸದ್ಯದಲ್ಲೇ ಕರ್ನಾಟಕದ ಈ ತಾಣ ಸೇರಲಿದೆ ಯುನೆಸ್ಕೋ ಪಟ್ಟಿಗೆ!

ಬೆಂಗಳೂರು, ಮೇ 20- ರಾಜ್ಯದ ಮತ್ತೊಂದು ಐತಿಹಾಸಿಕ ತಾಣ ಸದ್ಯದಲ್ಲೇ ಯುನೆಸ್ಕೋ ಪಟ್ಟಿಗೆ ಸೇಪ೯ಡೆಯಾಗಲಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಹಿರೇಬೆಣಕಲ್ ಗ್ರಾಮದಲ್ಲಿರುವ ಐತಿಹಾಸಿಕ ಮಹಾಶಿಲಾ ತಾಣ ಯುನೆಸ್ಕೋ ಪಟ್ಟಿಗೆ ಸೇರಲಿದೆ. ತಾತ್ಕಾಲಿಕ ಪಟ್ಟಿ ಪ್ರಕಟಿಸಿರುವ ಯುನೆಸ್ಕೋ ಪಟ್ಟಿಯಲ್ಲಿ ಭಾರತದ 6 ಐತಿಹಾಸಿಕ ಪ್ರದೇಶಗಳನ್ನು ‌ಗುರುತಿಸಿದೆ.

ಕುಬ್ಜರ ಬೆಟ್ಟ ಎಂದು ಖ್ಯಾತಿ ಪಡೆದಿರುವ ಈ ಪ್ರದೇಶದಲ್ಲಿ 2001ರಲ್ಲಿ ಈ ಪ್ರದೇಶದಲ್ಲಿ ಪುರಾತತ್ವ ಇಲಾಖೆ ಉತ್ಕನನ ನಡೆಸಿತ್ತು.
ಉತ್ಕನದ ವೇಳೆ ಸುಟ್ಟು ಕರಕಲಾದ ಪ್ರಾಣಿಯ ಮೂಳೆ ಮತ್ತು ಮಡಿಕೆ ಪತ್ತೆಯಾಗಿತ್ತು.ಸ್ಥಳೀಯರ ನಂಬಿಕೆಯ ಪ್ರಕಾರ ಇಲ್ಲಿ ಕುಬ್ಜರು ವಾಸವಾಗಿದ್ದರು. ಶೀಘ್ರದಲ್ಲಿ ಯುನೆಸ್ಕೋ ಅಂತಿಮ ಮುದ್ರೆ ಒತ್ತಲಿದೆ.

error: Content is protected !!