ಸದಸ್ಯತ್ವ ರದ್ದುಗೊಳಿಸುಂತೆ ಜಿಲ್ಲಾಧಿಕಾರಿಗಳಿಗೆ ಎಸ್ ಡಿ ಪಿ ಐ ಮನವಿ

ಮಡಿಕೇರಿ ನಗರಸಭೆಯ ಬಿಜೆಪಿ ಪಕ್ಷದ ಚುನಾಯಿತ ಸದಸ್ಯ ಕೆ.ಎಂ ಅಪ್ಪಣ್ಣ ನಗರಸಭೆಯ ಕೆಲಸಗಳನ್ನು ಅಧಿಕಾರ ದುರುಪಯೋಗದ ಲಾಭದಾಯಕ ವ್ಯವಹಾರ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿ, ಅವರ ಸದಸ್ಯತ್ವ ರದ್ದಗೊಳಿಸಬೇಕೆಂದು ಎಸ್. ಡಿ.ಪಿ.ಐ ಪಕ್ಷದ ನಗರಸಭೆಯ ಸದಸ್ಯರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಪ್ಪಣ್ಣ ಅವರಿಗೆ ಸೇರಿದ ಪ್ಲಾಂಟರ್ಸ್ ವರ್ಲ್ಡ್ ಎಂಬ ವಾಣಿಜ್ಯ ವ್ಯವಹಾರದ ಸಂಸ್ಥೆಯ ಮುಖಾಂತರ ,ಮಡಿಕೇರಿ ನಗರಸಭೆಯ ನೈರ್ಮಲ್ಯ ವಿಭಾಗದ ಕಾಡು ಕುಡಿಯುವ ಯಂತ್ರದ ದುರಸ್ತಿ ಕೆಲಸ ಕಾರ್ಯಗಳನ್ನು 2021ರ ಅಕ್ಟೋಬರ್ ನಿಂದ ನಗರಸಭೆಯಿಂದ ಹಣ ಪಡೆದು ನಗರಸಭೆಯ ಬಿಲ್ಲಿನ ದುರುಪಯೋಗ ಮಾಡಿದ್ದಾರೆ ಎಂದು ಎಸ್.ಡಿ.ಪಿ.ಐ ಸದಸ್ಯರು ಆರೋಪಿಸಿದ್ದಾರೆ.

error: Content is protected !!