ಸಡಿಲವಾಗದ ಮಾವುತರು, ಕಾವಾಡಿಗರ ಪಟ್ಟು!

ಸರ್ಕಾರ ಮತ್ತು ನಾಡ ಹಬ್ಬ ದಸರಾ ಸಮಿತಿ ಜಂಬೂಸವಾರಿ ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೇ ಕುಶಾಲನಗರ ತಾಲ್ಲೂಕಿನ ದುಬಾರೆ ಮತ್ತು ಮತ್ತಿಗೋಡುವಿನ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಯಾವುದೇ ಆನೆಗಳು ತೆರಳಲು ಬಿಡುವುದಿಲ್ಲ ಎಂದು ಮಾವುತರು, ಕಾವಾಡಿಗಳು ಪಟ್ಟು ಹಿಡಿದಿದ್ದಾರೆ.

ವೇತನ ಪರಿಷ್ಕರಣೆ,ವೃತ್ತಿ ಖ್ಯಾತಿ ಬಗ್ಗೆ ಕಳೆದ ಬಾರಿ ಮಾತು ನೀಡಿದ್ದ ಸರ್ಕಾರ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಕಾರಣ ಹೋರಾಟಕ್ಕೆ ಮುಂದಾಗಿರುವ ಮಾವುತರು ಮತ್ತು ಕಾವಾಡಿಗಳು ಇಂದು ಸಭೆ ನಡೆಸಿ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.
ಈ ನಡುವೆಯೂ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಅರಣ್ಯ ಇಲಾಖೆ ಆನೆಗಳನ್ನು ಮೈಸೂರಿಗೆ ಈ ತಿಂಗಳ ಮೂದಲ ವಾರದಲ್ಲಿ ಸಾಗಿಸಲು ಸಿದ್ದತೆ ನಡೆಸಿದೆ.