ಸಜೀವ ದಹನ ಪ್ರಕರಣ ಆರೋಪಿ ಮೊಬೈಲ್ ಸ್ವಿಚ್ಡ್ ಆಫ್..!

ಕೊಡಗು: ಲೈನ್ ಮನೆಯಲ್ಲಿದ್ದ ಪತ್ನಿ ಸೇರಿ ಆರು ಮಂದಿಯ ಸಜೀವ ದಹನಕ್ಕೆ ಕಾರಣನಾದ ಆರೋಪಿ ಯರವರ ಬೋಜ ಪತ್ತೆಗಾಗಿ ಶೋಧಕಾರ್ಯ ತೀವ್ರಗತಿಯಲ್ಲಿ ನಡೆಸಲಾಗುತ್ತಿದ್ದು ಘಟನೆ ನಡೆದ ದಿನದಿಂದಲೇ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಟವರ್ ಲೊಕೇಶನ್ ಸಿಗದೆ ಶೋಧ ಕಾರ್ಯಕ್ಕೆ ಸಮಸ್ಯೆ ಉಂಟಾಗಿದೆ.ಈಗಾಗಲೇ ಐದು ತಂಡ ರಚಿಸಿ ಶೋಧಾಕಾರ್ಯ ನಡೆಸಲಾಗುತ್ತಿದ್ದ ತಂಡ ಬೋಜನ ಸಂಬಂಧಿಕರು,ಓಡಾಡುತ್ತಿದ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಬೋಜ ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಈತನ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡಲಾಗಿದ್ದು ಪತ್ತೆ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸುವಂತೆ ಪೋಲಿಸ್ ಇಲಾಖೆ ಮನವಿ ಮಾಡಿದೆ.

error: Content is protected !!