ಸಚಿವ ಆರ್.ಅಶೋಕ್ ಅವರಿಗೆ ಧರಣಿ ನಿರತರಿಂದ ಮನವಿ ಪತ್ರ ಸಲ್ಲಿಕೆ

ಸೆಪ್ಟೆಂಬರ್‌ ಹನ್ನೆರಡರಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸುತ್ತಿದ್ದಾಗ ಕಂದಾಯ ಸಚಿವರಾದ ಆರ್ ಅಶೋಕ್ ಮತ್ತು ಮಡಿಕೇರಿ ಶಾಸಕರಾದ ಅಪ್ಪಚ್ಚು ರಂಜನ್ ಅವರ ಜೊತೆ ಸ್ಥಳಕ್ಕೆ ತೆರಳಿ ಅವರ ಮನವಿಯನ್ನು ಸ್ವೀಕರಿಸಲಾಯಿತು.

ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವುದರ ಜೊತೆಗೆ ಹುತಾತ್ಮ ಯೋಧರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರಕಾರಿ ನೌಕರಿಯನ್ನು ನೀಡುವುದಕ್ಕೆ ರಾಜ್ಯ ಸರಕಾರವು ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.

error: Content is protected !!