ಸಕಲ ಕಲಾ ವಲ್ಲಭ ಕೆ.ಡಿ ಹರಿಕೃಷ್ಣ!

ಕಲಾವಿದನೊಬ್ಬ ಹೆಸರಿಗೆ, ಹಣಕ್ಕೆ ಆಸೆ ಪಡುತ್ತಾನೆ ಅನ್ನೋದು ಶುದ್ಧ ಸುಳ್ಳು. ಅಭಿಮಾನಿಗಳ ಚಪ್ಪಾಳೆಯೇ ಅವನ ಬಲುದೊಡ್ಡ ಸಂತೋಷ. ಆ ಕ್ಷಣ ತನ್ನ ಸಾವಿರ ನೋವನ್ನು ಮರೆತು ಸಂತೋಷಪಡುತ್ತಾನೆ. ಸಾವಿರಾರು ಅಭಿಮಾನಿಗಳನ್ನು ರಂಜಿಸುತ್ತಾನೆ. ಇಂತಹ ಕಲಾವಿದರಲ್ಲೊಬ್ಬ ಕೆ.ಡಿ. ಹರಿಕೃಷ್ಣ. ತೆರೆಮರೆಯ ಸಾಧಕ, ಚಿತ್ರಕಲಾವಿದ, ಬೈಕ್ ರೈಡರ್, ಬರಹಗಾರ, ನೃತ್ಯಗಾರ ಒಟ್ಟಾರೆ ಹೇಳಬೇಕಾದರೆ ಸಕಲ ಕಲಾ ವಲ್ಲಭ…

ತಂದೆಯೊಂದಿಗೆ ಪೂಜೆ, ದೇವಾಲಯದ ವಾರ್ಷಿಕೋತ್ಸವದಲ್ಲಿ ಭಾಗಿಯಾಗುತಿದ್ದ ಅವರು, ಕೊಡಗು ಸೇರಿದಂತೆ ಹೊರ ಜಿಲ್ಲೆಗಳಲ್ಲಿರುವ ದೇವಾಲಯಗಳ ಉತ್ಸವಮೂರ್ತಿ ಹೊತ್ತು ನೃತ್ಯ ಮಾಡುವಲ್ಲಿ ಪರಿಣಿತ…
ಈ ಕಲಾವಿದ ಕೈ ಚಳಕದಿಂದ ಮೂಡಿದ ಉತ್ಸವಮೂರ್ತಿ ಅಲಂಕಾರ ಭಕ್ತರಲ್ಲಿ ಹೆಚ್ಚಿನ ಭಕ್ತಿ ಮೂಡಿಸುವುದರಲ್ಲಿ ಸಂದೇಹ ಇಲ್ಲ… ಈ ಹಿಂದೆ ಕೆಂಪು ಬಟ್ಟೆ, ಹೂವು, ಪಿಂಗಾರದಿಂದ ಅಲಂಕಾರ ಗೊಳ್ಳುತಿದ್ದ ಉತ್ಸವ ಮೂರ್ತಿಯ ಬೇರುಗು  ಹೆಚ್ಚಿಸಲು ಯುವ ಕಲಾವಿದರು ಶ್ರಮ ವಹಿಸುತ್ತಿದ್ದಾರೆ…

ಈಗಾಗಲೇ ಬಹುತೇಕ ದೇವಾಲಯಗಳ ಹಬ್ಬಗಳಲ್ಲಿ ಪ್ರಯೋಗಿಸಲಾಗಿದೆ… ಭಕ್ತರಿಗೂ ಇದು ನೆಮ್ಮದಿ ಹಾಗೂ ಸಂತೋಷ ನೀಡುವ ವಿಷಯ..
(ತಡುಂಬು ಎಂದರೆ ದೇವರ ಉತ್ಸವ ಮೂರ್ತಿಗೆ ಹಲಗೆ, ಬೆಳ್ಳಿ ತಟ್ಟೆ ಬಳಸಿ ಮಾರ್ಪಾಡು ಮಾಡಿ, ಹೂವುಗಳಿಂದ ಅಲಂಕರಿಸಿ ನೃತ್ಯ ಮಾಡುವುದು, ಕೇರಳ, ಕೊಡಗು ಜಿಲ್ಲೆಯ ದೇಗುಲಗಳಲ್ಲಿ “ತಡಂಬು” ಕಟ್ಟುವುದು ಎಂದೂ, ಕೆಲವು ಕಡೆ ಉತ್ಸವ ಮೂರ್ತಿ, ಪರಶುರಮನ ಕ್ಷೇತ್ರದಲ್ಲಿ ಆಟ್ಟೆ ಕಟ್ಟುವುದು ಎಂದು ಹೇಳಲಾಗುತ್ತದೆ…)
ತಡುಂಬುವಿನ ಹಿಂದೆ ಬೆಳ್ಳಿ ಕವಚ ಇಟ್ಟು, ಅದಕ್ಕೆ ಇನ್ನೂ ಹೆಚ್ಚಿನ ಹೂವುಗಳನ್ನು ಬಳಸಿ, ಮಿಶ್ರ ಹೂವುಗಳನ್ನು ಜೋಡಿಸಿ ಕಟ್ಟಲಾಗುತ್ತದೆ. ಹೀಗಾಗಿ ಉತ್ಸವ ಮೂರ್ತಿ ಕಣ್ಮನ ಸೆಳೆಯುತ್ತದೆ..
ದೇವರ ನೆರಪು , ಸ್ಥಾನ ಸಂದರ್ಭದಲ್ಲಿ ಹರಿಕೃಷ್ಣ ಅವರ ಅಲಂಕಾರ ಅತ್ಯದ್ಭುತ,
ಪದವಿ ಶಿಕ್ಷಣ ಪಡೆದು ಪ್ರೈವೇಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು , ಈಗ ಉದ್ಯೋಗ ತ್ಯಜಿಸಿ ಚಿತ್ರಕಲೆ,ಅಲಂಕಾರಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ…

ಒಟ್ಟಿನಲ್ಲಿ ವೀರಾಜಪೇಟೆಯ ಈ ಕಲಾವಿದನ ಕೈಚಳಕ ಎಲ್ಲಾರ ಗಮನ ಸೆಳೆಯುವಂತೆ ಮಾಡಿದೆ. ಇವರ ಈ ಕಲೆಗೆ ಮತ್ತಷ್ಟು ಮನ್ನಣೆ ಸಿಗುವಂತಾಗಲಿ.ಈ ಮೂಲಕ ಉತ್ತಮ ಹೆಸರುಗಳಿಸಲಿ ಎಂಬುದು ಎಲ್ಲರ ಆಶಯ..

ಸಂಗ್ರಹ ಬರಹ : ಅಣ್ವೇಶ್ ಕೇಕುಣ್ಣಾಯ
error: Content is protected !!