ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಜಿಲ್ಲೆಯ ಬೆಳೆಗಾರ ಬಲಿ

ಕಾಡಾನೆ ದಾಳಿಗೆ ಕೊಡಗು ಮೂಲದ ಕಾಫಿ ಬೆಳೆಗಾರರೊಬ್ಬರು ಬಲಿಯಾದ ಘಟನೆ ನಡೆದಿದೆ.

ಇಂದು ಬೆಳಗಿನ ಜಾವ ಹಾಸನದ ಸಕಲೇಶಪುರ ಬಳಿಯ ಕಿರುಹುಣಸೆ ಎನ್ನುವಲ್ಲಿ ಒಂಟಿ ಸಲಗ ಮನೆಯ ಸುತ್ತಮುತ್ತ ಅಲೆದಾಡುತ್ತಿತ್ತು ಎನ್ನಲಾಗುತ್ತಿತ್ತು. ಇದೇ ವೇಳೆ ತೋಟದತ್ತ ತೆರಳುತ್ತಿದ್ದ ಕೊಡಗಿನವರಾದ ಮಾಲೀಕ ಕಲಿಯಂಡ ಬಿದ್ದಯ್ಯ ( 59)ರವರ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಆನೆಗಳ ಓಡಾಟ ಹೆಚ್ಚಾಗಿದ್ದು, ಕಾಡಾನೆ ಚಲನ ವಲನಗಳ ಬಗ್ಗೆ ಮಾಹಿತಿ ನೀಡದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!