ಸಂಭ್ರಮದಿಂದ ನಡೆದ ಕೆಸರುಗದ್ದೆ ಕ್ರೀಡಾಕೂಟ

ಕೊಡಗಿನಲ್ಲಿ ಕಕಡ(ಆಟಿ) ಮಾಸದಲ್ಲಿ ಮಳೆ ಸ್ವಲ್ಪ ಬಿಡುವು ಕೊಡುತ್ತಿದಂತೆ ಭತ್ತದ ನಾಟಿ ಕೆಲಸದ ಮುನ್ನ ಗದ್ದೆಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟ ನಡೆಯುವುದು ಸಹಜ,ಅದರಂತೆ ಕೆಲವು ವರ್ಷಗಳಿಂದ ಕೊಡಗಿನಲ್ಲಿ ಸರ್ಕಾರವೇ ಈ ರೀತಿಯ ಕ್ರೀಡಾಕೂಟಕ್ಕೆ ಉತ್ತೇಜನ ನೀಡುತ್ತಿದೆ.
ಜಿಲ್ಲಾ ಪಂಚಾಯ್ತಿ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ನೆಹರು ಯುವ ಕೇಂದ್ರ ಸೇರಿದಂತೆ ಹಲವು ಸಂಘ ಸಂಸ್ಥೆಯ ಸಹಯೋಗದೊಂದಿಗೆ ಕಳೆದ 3 ವರ್ಷದಿಂದ ಕೋವಿಡ್ ನಿಂದ ಸ್ಥಗಿತಗೊಂಡಿದ್ದ ಈ ರಾಜ್ಯಮಟ್ಟದ ಕ್ರೀಡಾಕೂಟ ಪೊಡನೋಳಂಡ ಬೋಪಣ್ಣ ಕುಶಾಲಪ್ಪರವರ ಭತ್ತದ ಗದ್ದೆಯಲ್ಲಿ ಆಯೋಜಿಸಲಾಗಿತ್ತು.
ಕಳೆದ 30 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ಕ್ರೀಡಾಕೂಟಕ್ಕೆ ಶಾಸಕ ಅಪ್ಪಚ್ಚು ರಂಜನ್ ವಾಲಿಬಾಲ್ ಸರ್ವಿಸ್ ಮೂಲಕ ಚಾಲನೆ ನೀಡಿದರು.
ಕ್ರೀಡಾಕೂಟದಲ್ಲಿ ಸಾರ್ವಜನಿಕ ಪುರುಷ ಮತ್ತು ಮಹಿಳೆಯರಿಗೆ ಮುಕ್ತ ಓಟದ ಸ್ಪರ್ಧೆ, ಹಗ್ಗಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿಗಳು ನಡೆದವು.ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ತಂಡಗಳು ಆಗಮಿಸಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು,ಕೇಸರಿ ಓಕುಳಿ ನಡುವೆ ತೀವ್ರ ಪೈಪೋಟಿ ನೀಡುವ ಮೂಲಕ ಮಿಂದೆದೆದ್ದರು.
ವರ್ಷಕ್ಕೊಮ್ಮೆ ನಡೆಯುವ ಈ ದೊಡ್ಡ ಮಟ್ಟದ ಕ್ರೀಡಾಕೂಟಕ್ಕೆ ತುಂತುರು ಮಳೆಯನ್ನು ಲೆಕ್ಕಿಸದೆ ಕ್ರೀಡಾಭಿಮಾನಿಗಳು ಸಂಭ್ರಮಿಸಿದರು.