ಸಂಭ್ರಮದಿಂದ ಜರುಗಿದ ಟಿಬೇಟಿಯನ್ನರ ಲೋಸಾರ್ ಆಚರಣೆ

ಕುಶಾಲನಗರ ಸಮೀಪದ ಬೈಲಕುಪ್ಪೆಯಲ್ಲಿ ನಿರಾಶ್ರಿತರ ಟಿಬೆಟಿಯನ್ ನಾಗರಿಕರ ನೂತನ ವರ್ಷಾಚರಣೆ ಅದ್ದೂರಿಯಾಗಿ ನೆರವೇರಿತು.
ಮಾರ್ಚ್ 3 ರಂದು ಆರಂಭಗೊಂಡ ನೂತನ ವರ್ಷದ “ಲೋಸರ್” ಆರಂಭಗೊಂಡ ವರ್ಷಾಚರಣೆ ಪ್ರತಿನಿತ್ಯ ಒಂದಲ್ಲಾ ಒಂದು ಧಾರ್ಮಿಕ ಪೂಜೆ ಕಾರ್ಯಗಳು ನಡೆದವು.
ವಿಶ್ವದ ಅತೀ ದೊಡ್ಡ ಚಿತ್ರಪಟ ಎನ್ನುವ ಖ್ಯಾತಿಯ 200 ಅಡಿ ಎತ್ತರ, 180 ಅಡಿ ಅಗಲದ ಪದ್ಮಸಂಭವ ಮತ್ತು ಅಮಿತಾಯೂಸ್ ಚಿತ್ರಪಟ ಅನಾವರಣ ಗಳಿಸಿ ಪ್ರದರ್ಶನಕ್ಕೆ ಇರಿಸಲಾಗಿತ್ತು.
ಕಳೆದ 25 ವರ್ಷಗಳಿಂದ ಇಲ್ಲಿನ ಗೋಲ್ಡನ್ ಟೆಂಪಲ್ ಆವರಣದಲ್ಲಿರುವ ಏಳು ಅಂತಸ್ತಿನ ಕಟ್ಟಡ ಗೋಪುರದ ಮೇಲೆ ಅನಾವರಣ ಗೊಳಿಸಲಾಯಿತು. ಬಳಿಕ ಟಿಬೇಟಿಯನ್ನರ ಬಿಕ್ಕುಗಳು ಚಿತ್ರಪಟಕ್ಕೆ ಸಾಮೂಹಿಕ ಪೂಜೆ ಸಲ್ಲಿಸಿದರು.