ಸಂಪನ್ನಗೊಂಡ ವಿವಿಧ ದೈವಗಳ ಕೋಲ












ಮಂಜಿನನಗರಿ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದೂರುಮೊಟ್ಟೆ ಚೌಟಿ ಮರಿಯಮ್ಮ ದೇವಾಲಯದಲ್ಲಿ ವಿವಿಧ ದೈವಗಳ ಕೋಲ ಅದ್ದೂರಿಯಾಗಿ ನಡೆಯಿತು.
ಕೋವಿಡ್ ಸಂದರ್ಭ ಸಣ್ಣ ಪ್ರಮಾಣದ ರೀತಿಯಲ್ಲಿ ನಡೆಯುತ್ತಿದ್ದ ಕೋಲಗಳು, ವಿವಿಧ ತಂತ್ರಿಗೂ ದೀಪಾರಾಧನೆ ಮೂಲಕ ಹತ್ತಾರು ಅಡಿ ಎತ್ತರದಲ್ಲಿ ಜೋಡಿಸಿ ಕೊಂಡ ಸಿದ್ದಗೊಳಿಸಿ ಎರಡು ದಿನಗಳ ಕಾಲ ದೈವ ಕೋಲ ನಡೆದವು. ಥೀಮ್ ವೆಲ್ಲಾಟ್ ನಲ್ಲಿ ಬೈರವನ್, ಕರಿಂಗಳಿ, ಗುಳಿಗ,ಸಾಸ್ಥಪ, ವಿಷ್ಣು ಮೂರ್ತಿ, ಪಾಸ್ ಮೂರ್ತಿ, ಉಚ್ಚುಟ್ಟಾ, ರಕ್ತೇಶ್ವರಿ ಮೊದಲ ದಿನ ರಾತ್ರಿ 7 ಗಂಟೆಯಿಂದ ತಡರಾತ್ರಿ ಒಂದುಗಂಟೆವರೆಗೆ ನಡೆದರೆ, ಮರುದಿನ ಮತ್ತೆ ಬೆಳಗಿನ ಜಾವ ಗುಳಿಗ,ಬೈರವನ್,ಸಾಸ್ಥಪ, ವಿಷ್ಣು ಮೂರ್ತಿ,ಕರಿಂಗಾಳಿ,ಅಜ್ಜಪ್ಪ ಉಚ್ಚುಟಾ, ರಕ್ತೇಶ್ವರಿ ವಿಷ್ಣು ಮೂರ್ತಿ ಭಾರಣೆ ,ರಕ್ತೇಶ್ವರಿ ಭಾರಣೆ ಮೂಲಕ ಎರಡು ದಿನಗಳ ದೈವ ಕೋಲ ಸಂಪನ್ನ ಗೊಂಡಿತು.