fbpx

ಸಂಪತ್ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಸುದ್ದಿ ಸಂತೆ ಸೂಪರ್ Exclusive ಸುದ್ದಿ!

ಸುಳ್ಯ: ಇದೇ ತಿಂಗಳು 8ರಂದು ಬೆಳಿಗ್ಗೆ 7 ಗಂಟೆಗೆ ಸುಳ್ಯ ತಾಲೂಕಿನ ಕಸಬ ಗ್ರಾಮದ ಶಾಂತಿನಗರ ಎಂಬಲ್ಲಿ ಕಲ್ಲುಗುಂಡಿ ನಿವಾಸಿ ಸಂಪತ್ ಕುಮಾರ್ ಎಂಬುವವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ತನಿಖೆ ನಡೆಯುತ್ತಿತ್ತು.

ಇತ್ತೀಚೆಗೆ ಕೊಲೆಯಾಗಿದ್ದ ಕಳಗಿ ಕೊಲೆ ಪ್ರಕರಣದ ಆರೋಪಿ ಸಂಪತ್ ಕುಮಾರ್

ಇಂದು ಸುಳ್ಯ ಪೊಲೀಸರು ಶಿಫ್ರ ಕಾರ್ಯಾಚರಣೆ ನಡೆಸಿ, ಸಿಪಿಐ ಸುಳ್ಯ ನವೀನ್, ಚಂದ್ರ, ಜೋಗಿರವರ ನೇತೃತ್ವದಲ್ಲಿ ಪಿಎಸ್ಐ ಹರೀಶ್ ತಂಡ ಹಾಗು ಡಿ.ಸಿ.ಐ.ಬಿ ತಂಡವು ಸುಬ್ರಮಣ್ಯದ ಬಿಸ್ಲೆ ಘಾಟ್ ರಸ್ತೆಯಲ್ಲಿ ಸ್ವಿಫ್ಟ್ ಕಾರನಲ್ಲಿ (KA 12 M A4385) ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳಾದ ಮನು, ಕಾರ್ತಿಕ್, ಬಿಪಿನ್, ಮಧು, ಹಾಗು ಶಿಶಿರ್ ಎಂಬುವವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕ್ವಾಲೀಸ್(KA 19 MF 0789) ವಾಹನ ಸೇರಿದಂತೆ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳಾದ ಕತ್ತಿ, ಚೂರಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

2019ರಲ್ಲಿ ಕೊಲೆಯಾದ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಚಿತ್ರ

ಪ್ರಕರಣದಲ್ಲಿ ಕೊಲೆಯಾದ ಸಂಪತ್ ಕುಮಾರ್ ಅವರು 2019ರಲ್ಲಿ ಮಡಿಕೇರಿಯಲ್ಲಿ ನಡೆದ ಕಳಗಿ ಬಾಲಚಂದ್ರ ಅವರ ಕೊಲೆ ಪ್ರಕರಣದ ಆರೋಪಿಯಾಗಿದ್ದರು. ನಂತರ ಅವರು ಸುಳ್ಯದ ಶಾಂತಿನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದರು. ಆರೋಪಿಗಳು ಕಳಗಿ ಬಾಲಚಂದ್ರ ಅವರ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆಯನ್ನು ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇನ್ನೂ ಪ್ರಕರಣವು ತನಿಖಾ ಹಂತದಲ್ಲಿ ಇದ್ದು, ಮತ್ತಷ್ಟು ಸತ್ಯಗಳು ಹೊರ ಬೀಳುವ ದಟ್ಟ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.

error: Content is protected !!