ಸಂತೃಸ್ಥರ ಮನೆಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಬೇಟಿ ನೀಡಿ ಸಾಂತ್ವನ :ಹುಲಿ ದಾಳಿಗೆ ಹಸು ಬಲಿ
ನಿನ್ನೆ ದಿವಸ ನಿಟ್ಟೂರು ಕಾರ್ಮಾಡು ಬೆಂಡೆಕುತ್ತಿ ಕೆರೆಯ ಸಮೀಪ ದನಗಳನ್ನು ಮೇಯಿಸುತಿದ್ದ ರಾಜುರವರ ಕಣ್ಣೆದುರಿಗೆ ದಾಳಿ ಮಾಡಿದ ಹುಲಿಯು ಹಸುವೊಂದನ್ನು ಕೊಂದು ಹಾಕಿದ ಘಟನೆಯ ಹಿನ್ನೆಲೆಯಲ್ಲಿ ಇಂದು ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಟಿಮಾಡ ಶರೀನ್ ಮುತ್ತಣ್ಣ, ಉಪಾಧ್ಯಕ್ಷೆ ಪಡಿಞರಂಡ ಕವಿತಾಪ್ರಭು ಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪ, ಸದಸ್ಯರಾದ ಅಮ್ಮಣಿ, ಅಮ್ಮಯ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್.ವನ್ಯಜೀವಿ ಸ್ವಯಂ ಸೇವಾ ಸಂಘಟನೆಯ ಕಾಡೇಮಾಡ ಸುಬ್ಬಯ್ಯ ರಾಜುರವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಿದರು. ಅರಣ್ಯ ಇಲಾಖೆಯಿಂದ ಮತ್ತು ವನ್ಯಜೀವಿಗಳ ಸ್ವಯಂ ಸೇವಾ ಸಂಘಟನೆಗಳಿಂದ ಹೆಚ್ಚಿನ ಪರಿಹಾರ ದೊರಕಿಸಲು ಪ್ರಮಾಣಿಕ ಪ್ರಯತ್ನ ನಡೆಸುವುದಾಗಿ ರಾಜು ಮತ್ತು ಕುಟುಂಬಸ್ಥರಿಗೆ ತಿಳಿಸಿದರು