ಶ್ರೀ ಭಗವಾನ್ ಸಂಘದ ಸದಸ್ಯರಿಂದ ಸೇತುವೆಯಿಂದ ಮರ ತೆರವು ಕಾರ್ಯಾಚರಣೆ

ಪ್ರಾಕೃತಿಕ ವಿಕೋಪದಿಂದಾಗಿ ಹಾನಿಗೊಳಗಾದ ಊರುಬೈಲು ಸೇತುವೆಯಲ್ಲಿ ಸಂಗ್ರಹವಾಗಿದ್ದ ದೊಡ್ಡ ಪ್ರಮಾಣದ ಮರಗಳನ್ನು ತಾ.11ರಂದು ಶ್ರೀ ಭಗವಾನ್ ಸಂಘದ ಸದಸ್ಯರು ಜೆಸಿಬಿ ಮತ್ತು ಯಂತ್ರಗಳ ಮೂಲಕ ತೆರವು ಮಾಡುವ ಕಾರ್ಯಾಚರಣೆ ನಡೆಸಿದರು. ಸೇತುವೆಯನ್ನು ಮತ್ತೆ ಸಂಚಾರಕ್ಕೆ ಸಿದ್ದಪಡಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರು ಗೌರವಾದ್ಯಕ್ಷ ಶ್ರೀ ಅನಂತ್ ಊರುಬೈಲುರವರ ಮುಂದಾಳತ್ವದಲ್ಲಿ ಶ್ರಮದಾನ ನಡೆಸಿದ್ದರು.

ಶ್ರಮದಾನದಲ್ಲಿ ಸಂಘದ ಅದ್ಯಕ್ಷ ಶ್ರೀ ಯತೀಶ ಹನಿಯಡ್ಕ ,ಕಾರ್ಯದರ್ಶಿ ಶ್ರೀ ಶರತ್ ಹೊಸೂರು ಒಳಗೊಂಡಂತೆ ಸುಮಾರು 20 ಮಂದಿ ಭಾಗವಹಿಸಿದ್ದರು

error: Content is protected !!