ಶ್ರೀರಾಮ, ಸೀತಾದೇವಿ, ಲಕ್ಷ್ಮಣ ಮೂರ್ತಿಗಳಿಗೆ ಬೆಳ್ಳಿ ಕವಚ ಅರ್ಪಣೆ

ಸುಂಟಿಕೊಪ್ಪದ ಶ್ರೀ ಗೌರಿಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿರುವ 57 ನೇ ವರ್ಷದ ಗೌರಿಗಣೇಶೋತ್ಸವದ ಅಂಗವಾಗಿ ಗದ್ದೆಹಳ್ಳದಲ್ಲಿರುವ ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗೌರಿಯ ಉತ್ಸವ ಮೂರ್ತಿ ತಂದು ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿ ಬಳಿಕ ಭಕ್ತಾಧಿಗಳಿಂದ ದಾನವಾಗಿ ದೊರೆತ ಉಳಿತಾಯ ಹಣದಲ್ಲಿ ಎರಡು ಲಕ್ಷ ಮೌಲ್ಯದ ಬೆಳ್ಳಿ ಕವಚವನ್ನು ಶ್ರೀರಾಮ,ಸೀತಾದೇವಿ ಮತ್ತು ಲಕ್ಷ್ಮಣ ದೇವರ ಮೂರ್ತಿಗೆ ಅರ್ಪಿಸಲಾಯಿತು.