fbpx

ಶ್ರೀರಾಮ ಮತ್ತು ಕೃಷ್ಣ ದೇಶದ ಪರಂಪರೆ! ಅವರನ್ನು ಗೌರವಿಸಲು ಕಾನೂನು ಜಾರಿಗೊಳಿಸಬೇಕು… ಹೈಕೋರ್ಟ್ ಅಭಿಮತ

ಭಗವಾನ್ ರಾಮ, ಶ್ರೀಕೃಷ್ಣ, ರಾಮಾಯಣ ಹಾಗೂ ಅದರ ಕರ್ತೃ ವಾಲ್ಮೀಕಿ, ಗೀತಾ ಹಾಗೂ ಅದರ ಕರ್ತೃ ಮಹರ್ಷಿ ವೇದ ವ್ಯಾಸರು ದೇಶದ ಸಂಸ್ಕೃತಿ ಹಾಗೂ ಪರಂಪರೆಯಾಗಿದ್ದು, ಇವರೆಲ್ಲರಿಗೂ “ರಾಷ್ಟ್ರೀಯ ಸಮ್ಮಾನ್” ಗೆ(ರಾಷ್ಟ್ರೀಯ ಗೌರವ) ಸಂಸತ್ತು ಕಾನೂನು ತರಬೇಕು ಎಂದು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಹೇಳಿದೆ.

ಸಂವಿಧಾನವು ಒಬ್ಬರನ್ನು ನಾಸ್ತಿಕರನ್ನಾಗಿ ಮಾಡಲು ಅವಕಾಶ ನೀಡುತ್ತದೆ ಎಂದ ನ್ಯಾಯಾಲಯವು, ಆದರೆ ದೇವ, ದೇವತೆಗಳ ವಿರುದ್ಧ ಅಶ್ಲೀಲ ಹೇಳಿಕೆಗಳನ್ನು ರವಾನಿಸಬಹುದು ಎಂದು ಇದರ ಅರ್ಥವಲ್ಲ ಎಂದಿದೆ. ಎಲ್ಲಾ ಶಾಲೆಗಳಲ್ಲಿ ಇದನ್ನು ಕಡ್ಡಾಯ ವಿಷಯವನ್ನಾಗಿ ಮಾಡುವ ಮೂಲಕ ಈ ವಿಷಯದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವ ಅವಶ್ಯಕತೆಯಿದೆ ಎಂದು ನ್ಯಾಯಾಲಯ ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಹಂಚಿಕೊಂಡ ಆರೋಪ ಹೊತ್ತಿರುವ ಹತ್ರಾಸ್ ನ ಆಕಾಶ್ ಜಾತವ್ ಅವರ ಜಾಮೀನು ಅರ್ಜಿಯನ್ನು ಅನುಮತಿಸುವಾಗ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಈ ರೀತಿ ಅವಲೋಕಿಸಿದರು.
ಕಳೆದ 10 ತಿಂಗಳಿನಿಂದ ಜೈಲಿನಲ್ಲಿರುವ ಅರ್ಜಿದಾರನ ಮನವಿಯನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ಅರ್ಜಿಗೆ ಅನುಮತಿ ನೀಡಿತು. ಈ ಪ್ರಕರಣದ ಟ್ರಯಲ್ ಇನ್ನಷ್ಟೆ ಆರಂಭವಾಗಬೇಕಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆ ಮುಗಿಯುವ ಯಾವುದೇ ಅವಕಾಶವಿಲ್ಲ.

error: Content is protected !!