ಶ್ರೀಗಂಧ ಚೋರನ ಬಂಧನ

ಕೊಡಗು: ಸೋಮವಾರಪೇಟೆಯ ಅಳಿಲುಕೊಪ್ಪ ಗ್ರಾಮದಿಂದ ಶ್ರೀಗಂಧ ಮರವನ್ನು ಕಡಿದು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೋಲಿಸ್ ಅರಣ್ಯ ಸಂಚಾರಿ ದಳ ಬಂಧಿಸಿದ್ದಾರೆ.ಅದೇ ಗ್ರಾಮದ ಪ್ರಸನ್ನ ಎಂಬಾತ ಅಂದಾಜು 83 ಸಾವಿರ ಮೌಲ್ಯದ ಮರದ ತುಂಡನ್ನು ಸಾಗಿಸುವ ಖಚಿತ ಮಾಹಿತಿ ದೊರೆತು ದಾಳಿ ನಡೆಸಿದ್ದು ಮಾಲು ಸಮೇತ ಬಂಧಿಸಲಾಗಿದೆ.ಆರೋಪಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.