ಶ್ರೀಗಂಧದ ಚೋರನ ಬಂಧನ

ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಬಾಣಾವಾರ ಅರಣ್ಯ ವಲಯ ವಿಭಾಗದ ವ್ಯಾಪ್ತಿಯ ಅಂದಾನಿಪುರ ಗ್ರಾಮದ ಪೈಸರಿ ಜಾಗದಲ್ಲಿ ಮೂರು ಗಂಧದದ ಮರಗಳನ್ನು ಕತ್ತರಿಸಿ ಅಂದಾಜು 25 ಕೆ.ಜಿಯಷ್ಟು ಕೊರಟುಗಳನ್ನಾಗಿ ಮಾಡಿ ಸ್ಥಳದಿಂದ ಬೈಕಿನಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆಯ,ಬಲೆಗೆ ಬಿದ್ದಿದ್ದಾರೆ. ಗೋಣಿಮರೂರು ಗ್ರಾಮದ ರವಿ ಮತ್ತು ಮಹೇಂದ್ರ ಬಂಧಿತ ಆರೋಪಿಗಳಾಗಿದ್ದು ಮತ್ತೊಬ್ಬ ಆರೋಪಿ ನಾಗರಾಜ್ ಪರಾರಿಯಾಗಿದ್ದಾನೆ. ಬಂಧಿತರಿಂದ ಮಾಲು ಸಮೇತ ಒಂದು ಬೈಕು ವಶಕ್ಕೆ ಪಡೆಯಲಾಗಿದೆ.

error: Content is protected !!