ಶ್ರೀಕೃಷ್ಣನ ಜನ್ಮಸ್ಥಳಕ್ಕೆ ಪವಿತ್ರ ಕಾವೇರಿ ತೀರ್ಥ

ಕೊಡಗು(ತಲಕಾವೇರಿ): ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಸಂದರ್ಭ ಜೀವನದಿ ಕಾವೇರಿ ಮತ್ತು ಪವಿತ್ರ ಜಲವನ್ನು ನೀಡಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿರುವ ಶ್ರೀಕೃಷ್ಣನ ಜನ್ಮಸ್ಥಾನವಾದ ಯಮುನಾ ನದಿ ತಟದಲ್ಲಿರುವ ಮಥುರಾ ದೇವಾಲಯಕ್ಕೆ ಕಾವೇರಿ ತೀರ್ಥೋಧ್ಬದ ಬಳಿಕ ಪವಿತ್ರ ತೀರ್ಥವನ್ನು ಚೆಟ್ಟಳ್ಳಿಯ ಪುತ್ತರೀರ ಪಪ್ಪು ಅಲ್ಲಿನ ವೃಂದಾವನ ಮತ್ತು ಮಥುರಾ ದೇವಾಲಯಕ್ಕೆ ತಲುಪಿಸಲು ಯಶಸ್ವಿಯಾಗಿದ್ದಾರೆ.

ತಲಕಾವೇರಿಯಿಂದ ಪ್ಲಾಸ್ಟಿಕ್ ಕ್ಯಾನಿನಲ್ಲಿ 555 ಲೀಟರ್ ನಷ್ಟು ತೀರ್ಥ ಸಂಗ್ರಹಿಸಿ ಸ್ನೇಹಿತ ಬಟ್ಟೀರ ಶರೀನ್ ಸಹಾಯದಿಂದ ಮೈಸೂರಿನವರೆಗೆ ತಮ್ಮ ಪಿಕಪ್ ವಾಹನದಲ್ಲಿ ತೆಗೆದುಕೊಂಡು ಹೋಗಿ ಬಳಿಕ ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಿ
ಮಥುರಾ ನಗರಕ್ಕೆ ತಲುಪಿಸಿದ್ದಾರೆ.ಕಾವೇರಿ ತೀರ್ಥ ಪಡೆಯಲು ಮಥುರಾದಿಂದಲೇ ಹೆಲಿಕಾಪ್ಟರ್ ಬಂದಿರೋದು ವಿಶೇಷವಾಗಿದೆ.