ಶ್ರದ್ಧಾ ಭಕ್ತಿಯಿಂದ ನೆರವೇರಿದ ಉತ್ಸವ



ಗೋಣಿಕೊಪ್ಪ ಸಮೀಪದ ಕೈಕೇರಿ ಶ್ರೀ ಭಗವತಿ ದೇವಸ್ಥಾನ ವಾರ್ಷಿಕ ಉತ್ಸವ ಇಂದು ಸಂಪನ್ನಗೊಂಡಿತು, ನಿನ್ನೆ ಉತ್ಸವ ಪ್ರಯುಕ್ತ ಎತ್ತುಪೋರಾಟ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ನಂತರ ದೇವರ 5 ಸುತ್ತು ನೃತ್ಯ ಬಲಿ, ವಸಂತ ಪೂಜೆ, ಅಲಂಕಾರ ಪೂಜೆ, ಕುಂಕುಮಾರ್ಚನೆ ಮುಂತಾದ ಕಾರ್ಯಕ್ರಮಗಳು ಜರುಗಿದವು, ಪೂಜೆ ಕೈಂಕರ್ಯಗಳು ತಂತ್ರಿಗಳಾದ ಶ್ರೀ ಪಂಡರೀಷ ತಂತ್ರಿಗಳು ಹಾಗೂ ಮುಖ್ಯ ಅರ್ಚಕರಾದ ಶ್ರೀ ಗುರುರಾಜ್ ಅವರ ನೇತೃತ್ವದಲ್ಲಿ ನಡೆಯಿತು.

ಇಂದು ಸಂಜೆ ದೇವರ ಅವಭೃತ ಸ್ನಾನ ನಂತರ 11 ಸುತ್ತುಗಳ ನೃತ್ಯ ಬಲಿ ನಡೆಯಿತು. ಬ್ರಹ್ಮವಾಹಕರಾಗಿ ಶ್ರೀ ಸತ್ಯಮೂರ್ತಿ ಸರಳಾಯರು ಮತ್ತು ಅಲಾಂಕಾರವನ್ನು ಶ್ರೀ ಹರೀಕೃಷ್ಣ ನಿರ್ವಹಿಸಿದರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು. ಉತ್ಸವದ ಪ್ರಯುಕ್ತ ದಿನಂಪ್ರತಿ ಅನ್ನದಾನವನ್ನು ಏರ್ಪಡಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿಯ ಮತ್ತು ತಕ್ಕ ಮುಖ್ಯಸ್ಥರು ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದರು.