ಶ್ರದ್ಧಾ ಭಕ್ತಿಯಿಂದ ನಡೆದ ವಾರ್ಷಿಕೋತ್ಸವ ಮತ್ತು ಶ್ರೀ ಮುತ್ತಪ್ಪ ತೆರೆ ಮಹೋತ್ಸವ



ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ 29ನೇ ವಾರ್ಷಿಕೋತ್ಸವ ಮತ್ತು ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಮುತ್ತಪ್ಪನ ಕಲಶ ತರುವುದು, ಮಲೆ ಇರಿಸುವುದರಿಂದ, ವೆಳ್ಳಾಟಂ, ತೆರೆ ಶಾಸ್ತ್ರ , ಭಗವತಿತೆರೆ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ವಿಧಾನ ಪರಿಷತ್ ಸದಸ್ಯ ಎಂಪಿ ಸುಜಾಕುಶಾಲಪ್ಪ ಅವರು ಧ್ವಜಾರೋಹಣ ಮಾಡುವ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು.