fbpx

ಶ್ರದ್ಧಾಭಕ್ತಿಯಿಂದ ಜರುಗಿದ ಭಾಗಮಂಡಲ ಪೊಲಿಂಕಾನ ಉತ್ಸವ

ಜೀವನದಿ ಕಾವೇರಿ ತಪ್ಪಲಿನಲ್ಲಿರುವ ಭಾಗಮಂಡಲದ ಭಗಂಡೇಶ್ವರ ಕ್ಷೇತ್ರದ ದೇವಾಲಯದಲ್ಲಿ ಶ್ರದ್ದಾಭಕ್ತಿಯಿಂದ ಪೊಲಿಂಕಾನ ಉತ್ಸವ ವಿಶೇಷ ಪೂಜೆಯೊಂದಿಗೆ ನಡೆಯಿತು.

ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮಹಾಗಣಪತಿ, ಮಹಾವಿಷ್ಣು, ಸುಬ್ರಹ್ಮಣ್ಯ, ಭಗಂಡೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬಾಳೆದಿಂಡಿನಿಂದ ತಯಾರಿಸಿದ ಸುಮಂಗಲಿ ಮಂಟಪಕ್ಕೆ ದೀಪ ಬೆಳಗಿ, ಕರಿಮಣಿ, ತಾಯಿ,ಬಲೆ,ಸೀರೆ, ಬೆಳ್ಳಿತಟ್ಟೆ ಮತ್ತಿತ್ತರ ಆಭರಣಗಳನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಿ ಭಗಂಡೇಶ್ವರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.

ಆಷಾಢ ಮಾಸ ಸಂದರ್ಭ ಹೆಚ್ಚಾಗಿ ಮಳೆ ಬೀಳುವ ಹಿನ್ನಲೆಯಲ್ಲಿ ನದಿ ಶಾಂತವಾಗಿ ಹರಿಯಲಿ ಮತ್ತು ನದಿಯಿಂದ ಜೀವ ಸಂಕುಲಗಳು ಸಮೃದ್ದಿಯಾಗಿರಲಿ ಎನ್ನುವ ಮುಖ್ಯ ಉದ್ದೇಶದಿಂದ ಈ ಆಚರಣೆ ಮಾಡಲಾಗುತ್ತದೆ, ಹಾಗೆ ಬಾಳೆದಿಂಡಿನ ಮಂಟಪವನ್ನು ಬಾಗೀನ ಜೊತೆಗೆ ತ್ರಿವೇಣಿ ಸಂಗಮದಲ್ಲಿ ಬಿಡುವ ಮೂಲಕ ಕಾವೇರಿ ಮಾತೆಯ ಕೃಪೆಗೆ ಪಾತ್ರರಾದರು, ಮಳೆ ಕಡಿಮೆಯಾಗಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳೀಯರು ಉತ್ಸವದಲ್ಲಿ ಭಾಗಿಯಾಗಿದ್ದರು.

error: Content is protected !!