ಶ್ರದ್ದಾಭಕ್ತಿಯಿಂದ ಜರುಗಿದ ಶ್ರೀಕೃಷ್ಣ ಚಿನ್ನತಪ್ಪ ಉತ್ಸವ

ಇತಿಹಾಸ ಪ್ರಸಿದ್ದ ಕೊಡಗಿನ ಭಾಗಮಂಡಲದ ಅಯ್ಯಂಗೇರಿ ಗ್ರಾಮದಲ್ಲಿ ಪ್ರತಿ ವರ್ಷ ಜರುಗುವ ಚಿನ್ನತಪ್ಪ ಉತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು.

ಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆದು,ಈ ಭಾರಿ ಬಿದ್ದಿಯಂಡ ಶಿವಾಜಿ ದೇವಾಲಯದ ಮುಂಭಾಗದಲ್ಲಿ ನುಡಿಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು ನೆಂಟರಿಷ್ಟರು ಸೇರಿದಂತೆ ಈ ಗ್ರಾಮದಲ್ಲಿನ ದೇವಾಲಯಕ್ಕೆ ನೂರಾರು ಮಂದಿ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.
ಕತ್ತಲಿರುವಾಗಲೇ ಇಲ್ಲಿನ ಕಲ್ಲುಹೊಳೆಯಲ್ಲಿ ದಾರೆ ಪೂಜೆ ಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುವುದು, ಇದು ತಡರಾತ್ರಿ 2.30ರ ವರೆಗೂ ನಡೆಯಲಿದೆ.

ಮರುದಿನ ಬೆಳಗ್ಗೆ ಭಕ್ತರಿಂದ ಎಣ್ಣೆ ಹರಕೆ ಸಲ್ಲಿಸಲಾಗುತ್ತದೆ,ಬಳಿಕ ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಮಂದ್ ನಲ್ಲಿ ಮೂರು ಭಾರಿ ಕೊಳಲು ನುಡಿಸಲಾಗುವುದು, ಇದೇ ಸಂದರ್ಭ ಗರುಡಗಳು ಆಕಾಶದಲ್ಲಿ ಪ್ರತ್ಯಕ್ಷವಾಗುವುದು,ದೇವಾಲಯದ ಸುತ್ತ ಪ್ರದಕ್ಷಿಣಿ ಹಾಕುವುದು ವಿಶೇಷ.
ಕೃಷ್ಣನ ಪ್ರಿಯ ಗೋವುಗಳಾಗಿರುವುದರಿಂದ ಎತ್ತು ಪೋರಾ ನಡೆಸುವ ಸಂದರ್ಭ ಶ್ವೇತವರ್ಣ ದ ಧಿರಿಸಿನಲ್ಲಿ ಊರಮಂದ್ಗೆ ಮಹಿಳೆಯರು ಚರ್ಕು, ಚೆಂಬು ಹಿಡಿದು ಆಗಮಿಸಿದರು, ಈ ವೇಳೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಹಬ್ಬದ ಕಟ್ಟನ್ನು ಮುರಿಯಲಾಯಿತು. ಗ್ರಾಮದ 14 ಕುಳದದವರು ಭಾಗಿಯಾಗಿದ್ದ ಸಾಂಪ್ರದಾಯಿಕ ನೇತೃತ್ವವನ್ನು ತಕ್ಕ ಮುಖ್ಯಸ್ಥ ಬಿದಿಯಂಡ ಸುಭಾಷ್ ವಹಿಸಿದ್ದು, ಅನ್ನಸಂತರ್ಪಣೆ ಮೂಲಕ ಉತ್ಸವ ಅಂತತ್ಯಗೊಳಲ್ಲಿದೆ.

error: Content is protected !!