ಶ್ರದ್ದಾಭಕ್ತಿಯಿಂದ ಆರಂಭಗೊಂಡ ಚಿನ್ನತಪ್ಪ ಉತ್ಸವ


ಕೊಡಗು: ಶ್ರೀ ಕೃಷ್ಣನದು ಎನ್ನಲಾದ ಕೊಳಲನ್ನು ವರ್ಷಕೊಮ್ಮೆ ಹೊರತೆಗೆದು ನುಡಿಸುವ ಮೂಲಕ ಕೊಡಗಿನ ಅಯ್ಯಂಗೇರಿಯಲ್ಲಿರುವ, ಏಕೈಕ ಶ್ರೀ ಕೃಷ್ಣನ ಚಿನ್ನತಪ್ಪ ದೇವಾಲಯದ ಉತ್ಸವಕ್ಕೆ ಚಾಲನೆ ದೊರೆತಿದೆ.ಭಾಗಮಂಡಲ ಸಮೀಪವಿರುವ ಈ ದೇವಾಲಯದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು,ಭಕ್ತರ ಸಮ್ಮುಖದಲ್ಲಿ ಕೊಳಲನ್ನು ಊದುವ ಮೂಲಕ ಮೂರು ದಿನಗಳ ಉತ್ಸವಕ್ಕೆ ಚಾಲನೆ ದೊರೆತಿದೆ.ಮೂದಲನೆಯ ದಿನ ಕಲ್ಲಹೊಳೆಯಲ್ಲಿ ಧಾರೆ ಪೂಜೆ ನಡೆದಿದ್ದು ಪೂಜೆ ವೇಳೆ ಆಕಾಶದಲ್ಲಿ ಗರುಡ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಎರಡನೇ ದಿನ ಪಟ್ಟಣಿ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕೃಷ್ಣನ ಕೊಳಲಿಗೆ ವಿಶೇಷ ಪೂಜೆ ವಿಧಿವಿಧಾನಗಳು ನಡೆಯಲಿದೆ.ಗೊಲ್ಲ ಜನಾಂಗದವರು ಮತ್ತು ಗ್ರಾಮಸ್ಥರು ಒಟ್ಟಾಗಿ ಸೇರಿ ಆಚರಿಸುವ ಹಬ್ಬ ಇದಾಗಿದ್ದು ಸ್ಥಳೀಯ ಧಾರ್ಮಿಕ ಆಚರಣೆಗಳು ನಡೆಯಲಿವೆ.

error: Content is protected !!