ಶೌರ್ಯ ತಂಡದ ವತಿಯಿಂದ ಮಡಿಕೇರಿ ನಗರದ ಪ್ರಸಿದ್ಧ ಓಂಕಾರೇಶ್ವರ ದೇವಾಲಯದಲ್ಲಿ ಶ್ರಮದಾನ ಕಾರ್ಯಕ್ರಮ

ಮಡಿಕೇರಿ: ನಗರದ ಪುರಾತನ ದೇವಾಲಯಗಳಲ್ಲೊಂದಾದ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಇಂದು ಮಡಿಕೇರಿಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಶೌರ್ಯ ಘಟಕದ ವತಿಯಿಂದ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಸಮಿತಿಯ ಸದ್ಯಸರು ಓಂಕಾರೇಶ್ವರ ದೇವಾಲಯದ ಕೆರೆಯ ಆವರಣದಲ್ಲಿ ಕಳೆಕೊಚ್ಚುವ ಯಂತ್ರದ ಮುಖಾಂತರ ಆವರಣದಲ್ಲಿದ್ದ ಹುಲ್ಲನ್ನು ಕತ್ತರಿಸಿ ಭಕ್ತಾದಿಗಳ ಕೈ ಕಾಲು ತೊಳೆಯುವ ಸ್ಥಳದಲ್ಲಿ ಶುಚಿಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಲಾಯಿತು ಕುಡಿಯುವ ನೀರಿನ ಫಿಲ್ಟರ್ ಅನ್ನು ತಂಡದ ಸದಸ್ಯರು ಸುಚಿ ಗೊಳಿಸಿದರು ಶೌರ್ಯ ತಂಡದ ಸದಸ್ಯರುಗಳು ಓಂಕಾರೇಶ್ವರ ದೇವಾಲಯದ ಮೆಟ್ಟಿಲುಗಳು ಹಾಗೂ ಆವರಣಕ್ಕೆ ಬೀಚಿಂಗ್ ಪೌಡರ್ ಹಾಕಿ ಮೆಟ್ಟಿಲುಗಳು ಹಾಗೂ ದೇವಾಲಯದ ಗ್ರಿಲ್ ಗಳನ್ನು ತಂಡದ ಸದಸ್ಯರುಗಳು ಸುಚಿ ಗೊಳಿಸಿದರು ದೇವಾಲಯದ ವತಿಯಿಂದ ಎಲ್ಲ ಸದ್ಯಸರುಗಳಿಗೆ ಊಟ
ಹಾಗೂ ಕಾಫಿ ಟೀ ವ್ಯವಸ್ಥೆ ಮಾಡಲಾಯಿತು ಈ ಸಂದರ್ಭದಲ್ಲಿ ಓಂಕಾರೇಶ್ವರ ದೇವಾಲಯದ ಸಿಬ್ಬಂದಿಗಳಾದ ಭರತ್. ಪುನೀತ್. ಪಂಕಜ. ಹರೀಶ್ ಅವರುಗಳು ಶ್ರಮದಾನದಲ್ಲಿ ಕೈಜೋಡಿಸಿದರು ಈ ಶ್ರಮದಾನ ಕಾರ್ಯಕ್ರಮದಲ್ಲಿ ಮಡಿಕೇರಿ ಶೌರ್ಯ ತಂಡದ ಸದಸ್ಯರಗಳಾದ ರೋಹಿಣಿ. ಬಿ.ವಿ.ರವಿಗೌಡ. ಲಿಲ್ಲಿ ಗೌಡ. ಸೈಮನ್. ಕಿರಣ್. ತಾರಾಮಣಿ. ಯಶೋಧ. ಹಾಗೂ ಗ್ರಾಮಾಭಿವೃದ್ಧಿ ಸಂಘದ ಸದಸ್ಯರುಗಳಾದ ಫರೀದಾ ಬಾನು. ತಾಜುನಿಶಾ. ಬೇಬಿ. ರಜಿಯಾಭಾನು ಯಶವಂತ್. ಆಕಾಶ್. ಕಮಲಾಕ್ಷಿ. ಫೌಜಿಯ. ಜಯಶ್ರೀ. ನೀತು. ದಿವ್ಯ. ಝಕೀಯಾ ಹಾಗೂ ಹಲವು ಸದಸ್ಯರುಗಳು ಪಾಲ್ಗೊಂಡಿದರು
ವರದಿ:
ರೋಹಿಣಿ ಬಿ. ವಿ
ಸಂಯೋಜಕಿ
ಮಡಿಕೇರಿ ಘಟಕ