ಶೇ. 5 ಕ್ಕಿಂತ ಕಡಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಮಾತ್ರ ಅನ್ ಲಾಕ್ – ಕೊಡಗಿನಲ್ಲಿಯೂ ಅನ್ ಲಾಕ್ ಆಗುವ ಸಾಧ್ಯತೆಗಳಿದೆ

70- 30 ರಂತೆ ಲಾಕ್ ಡೌನ್ ಸಡಿಲಿಕೆಗೆ ಸಕಾ೯ರದ ಮಹತ್ವದ ತೀಮಾ೯ನ ತೆಗೆದುಕೊಂಡಿದ್ದು,ಕಳೆದ 50 ದಿನಗಳಿಂದ ಕೋವಿಡ್ ಹಿನ್ನಲೆಯಲ್ಲಿ ಜಾರಿಯಾಗಿದ್ದ ಲಾಕ್ ಡೌನ್ ಅಂತ್ಯಕ್ಕೆ ಇನ್ನು 1 ದಿನ ಮಾತ್ರ ಬಾಕಿ ಇರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಅನ್ ಲಾಕ್ ನಿಯಮಗಳ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.3.38 ಕ್ಕೆ ಇಳಿಕೆ ಹಿನ್ನಲೆ – ಅನ್ ಲಾಕ್ ಗೆ ನಿಧಾ೯ರ ಮಾಡಲಾಗಿದೆ.

ಸೋಮವಾರದಿಂದ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಅವಕಾಶ,ಹೋಟೇಲ್, ರೆಸ್ಟೋರೆಂಟ್ ಗಳಲ್ಲಿ ಎಸಿ ಬಳಸದೇ ಶೇ. 50 ರಷ್ಟು ಗ್ರಾಹಕರ ಕೂರುವಿಕೆಗೆ ಸಂಜೆ 5 ಗಂಟೆಯವರೆಗೆ ಅವಕಾಶ, ಬಾರ್ ಗಳಲ್ಲಿ ಪಾಸ೯ಲ್ ರೆಸಾಟ್೯ಗಳಲ್ಲಿ ಶೇ.50 ರಷ್ಟು ಸಾಮಥ್ಯ೯ದ ಗ್ರಾಹಕರಿಂದ ವಹಿವಾಟಿಗೆ ಅವಕಾಶ
ಬಸ್ ಗಳ ಸಂಚಾರಕ್ಕೂ ಸೋಮವಾರದಿಂದ ಅನುಮತಿ. – ಶೇ. 50 ರ ಸಾಮಥ್ಯ೯ದಲ್ಲಿ ಅವಕಾಶ.

ರಾತ್ರಿ ಕಫ್ಯೂ೯ ಮುಂದುವರೆಸಲು ಸಕಾ೯ರದ ತೀಮಾ೯ನ. ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಮೈಸೂರಿನಲ್ಲಿ ಈಗಿವಂತೆ ಲಾಕ್ ಡೌನ್ ಯಥಾಸ್ಥಿತಿ ಮುಂದುವರಿಕೆಯಾಗಲಿದೆ.
ಈಜುಕೊಳ, ಸಭೆ, ಸಮಾರಂಭ, ರಾಜಕೀಯ ಕಾಯ೯ಕ್ರಮಗಳು, ಶಿಕ್ಷಣ ಸಂಸ್ಥೆ, ಸಿನಿಮಾ ಮಂದಿರಗಳು, ಹವಾನಿಯಂತ್ರಿತ ಶಾಪಿಂಗ್ ಮಾಲ್ ಗಳಿಗೆ ನಿಭ೯ಂಧ ಮುಂದುವರಿಕೆಯಾಗಲಿದೆ.

error: Content is protected !!