fbpx

ಶಿಯೋಮಿ ಕಂಪೆನಿ ವಿರುದ್ಧ ಆಲ್ ಇಂಡಿಯಾ ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ಆಕ್ರೋಶ

ಚೈನಾ ದೇಶದ ಪ್ರಸಿದ್ಧ ಮೊಬೈಲ್ ಕಂಪೆನಿಯಾದ ಶಿಯೋಮಿ(xiaomi) ವಿರುದ್ಧ ಅಖಿಲ ಭಾರತ ಮೊಬೈಲ್ ವ್ಯಾಪಾರಸ್ಥರ ಸಂಘದ ಆಕ್ರೋಶ ವ್ಯಕ್ತಪಡಿಸಿದೆ.

ಪತ್ರಿಕಾ‌ ಹೇಳಿಕೆ‌ ನೀಡಿರುವ ಕೊಡಗು ಜಿಲ್ಲಾ ಆಲ್ ಇಂಡಿಯಾ ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ಸಂಘವು, ಶಿಯೋಮಿ ಕಂಪೆನಿಯು ಫ್ಲಿಪ್ ಕಾರ್ಟ್, ಅಮೇಜ಼ಾನ್ ನಂತಹ ಆನ್ ಲೈನ್ ಕಂಪೆನಿಗಳಿಗೆ ಬೇಕಾದಷ್ಟು ಮೊಬೈಲ್ ಗಳನ್ನು ನೀಡುತ್ತಿದೆ. ಆದರೆ ಸ್ಥಳೀಯ ಮೊಬೈಲ್ ವ್ಯಾಪಾರಸ್ಥರಿಗೆ ಸಾಕಷ್ಟು ಮೊಬೈಲ್ ಗಳನ್ನು ನೀಡುತ್ತಿಲ್ಲ. ಶಿಯೋಮಿಯ ಈ ತಾರತಮ್ಯ ನೀತಿಯಿಂದ ಮೊಬೈಲ್ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆಫ್ ಲೈನ್ ವ್ಯಾಪಾರಸ್ಥರಿಗೂ ಅಗತ್ಯವಾದ ಮೊಬೈಲ್ ದಾಸ್ತಾನುಗಳನ್ನು ಒದಗಿಸಿಕೊಡಬೇಕು ಎಂದು ಕೊಡಗು ಜಿಲ್ಲಾ ಆಲ್ ಇಂಡಿಯಾ ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಫರೀದ್ ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲಾ ಐಮರಾದ ಪ್ರಮುಖರಾದ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಶಿಯೋಮಿ ಕಂಪೆನಿಯು ಆನ್ ಲೈನ್ ಕಂಪೆನಿಗಳಿಗೆ ಮಾತ್ರ ಆಫರ್ ಗಳನ್ನು ನೀಡುತ್ತಿದೆ. ಆಫ್ ಲೈನ್ ಆದರೆ ಸ್ಥಳೀಯ ವ್ಯಾಪಾರಸ್ಥರಿಗೆ ಯಾವುದೇ ರಿಯಾಯಿತಿ ನೀಡಿತ್ತಿಲ್ಲ. ಇದರಿಂದ ಗ್ರಾಹಕರು ಆನ್ ಲೈನ್ ನತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಚಿಲ್ಲರೆ ಮೊಬೈಲ್ ವ್ಯಾಪಾರಸ್ಥರಿಗಳ ವ್ಯಾಪಾರವನ್ನು ಕಸಿದುಕೊಂಡಂತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌. ಅಲ್ಲದೇ ಹೊಸದಾಗಿ ಬಿಡುಗಡೆಯಾದ ಮೊಬೈಲ್ ದಾಸ್ತಾನುಗಳನ್ನು ಆನ್ ಲೈನ್ ಕಂಪೆನಿಗಳಿಗೆ ಮಾತ್ರ ನೀಡುತ್ತಿದ್ದಾರೆ. ಆನ್ ಲೈನ್ ಹಾಗೂ ಆಫ್ ಲೈನ್ ವ್ಯಾಪಾರಸ್ಥರಿಗೆ ಒಂದೇ ಸಮಯಕ್ಕೆ ಹೊಸ ದಾಸ್ತಾನುಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಐಮರಾ ಭಾರತದಾದ್ಯಂತ ಮೊಬೈಲ್ ರೀಟೈಲರ್ಸ್ ಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿಯೆತ್ತುತ್ತಿದೆ. ಇದರ ಬಗ್ಗೆ ಶಿಯೋಮಿ ಕಂಪೆನಿ ಮೊಬೈಲ್ ರೀಟೈಲರ್ಸ್ ನ ಸಮಸ್ಯೆಯನ್ನು ಗಮನಿಸಿ, ಮೊಬೈಲ್ ವ್ಯಾಪಾರಸ್ಥರ ಸಮಸ್ಯೆಯನ್ನು ಪರಿಹರಿಸಿಕೊಡಬೇಕು ಎಂದು ಒತ್ತಾಯಿಸಿದರು.
ಶಿಯೋಮಿ ಕಂಪೆನಿಯು, ಆನ್ ಲೈನ್ ಮತ್ತು ಆಫ್ ಲೈನ್ ಮೊಬೈಲ್ ವ್ಯಾಪಾರಸ್ಥರಿಗೆ ಒಂದೇ ಬೆಲೆಯಲ್ಲಿ ಮೊಬೈಲ್ ದಾಸ್ತಾನುಗಳನ್ನು ನೀಡಬೇಕು. ಒಂದೇ ಸಮಯಕ್ಕೆ ಮತ್ತು ಒಂದೇ ರಿಯಾಯಿತಿ ಬೆಲೆಯಲ್ಲಿ ಮೊಬೈಲ್ ಗಳನ್ನು ನೀಡಬೇಕು ಎಂದು ಐಮರಾದ ಪ್ರಮುಖ ಸುರೇಶ್ ಆಗ್ರಹಿಸಿದ್ದಾರೆ.

error: Content is protected !!