ಶಾಸಕ ರಂಜನ್ ಹೋಂ ಕ್ವಾರಂಟೈನ್

ಕೊಡಗು: ಕೊರೊನಾ ಸೊಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಕಳೆದ ಗುರುವಾರ ಕಾರ್ಯನಿಮಿತ ಬೆಂಗಳೂರಿನಲ್ಲಿ ಭೇಟಿ ಮಾಡಿದ ಕಾರಣ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಮ್ಮ ಮನೆಯಲ್ಲಿ ಹೋಂ ಕ್ವಾರಂಟೈನ್ ಒಳಗಾಗಿದ್ದಾರೆ,ವೈದ್ಯರಿಂದ ಪರೀಕ್ಷೆ ನಡೆಸಲಾಗಿದ್ದು ಯಾವುದೇ ಸೋಂಕು ಇಲ್ಲದಿದ್ದರೂ ಮುಂಜಾಗೃತಾ ಕ್ರಮವಾಗಿ ಗೃಹಸಂಪರ್ಕ ತಡೆಗೆ ಒಳಗಿದ್ದಾರೆ.ವೈದ್ಯರ ಸೂಚನೆಯಂತೆ ನಿರ್ಧಿಷ್ಟ ಸಮಯದವರಗೆ ಮನೆಯಲ್ಲೇ ಇರಲಿದ್ದು ಸದ್ಯಕ್ಕೆ ಕ್ಷೇತ್ರದ ಜನತೆ ಭೇಟಿ ಮಾಡಬಾರದು ಎಂದು ತಿಳಿಸಿದ್ದಾರೆ.