fbpx

ಶಾಸಕ ರಂಜನ್ ಹಾರಂಗಿ ಜಲಾಶಯಕ್ಕೆ ದಿಢೀರ್ ಭೇಟಿ, ಪರಿಶೀಲನೆ

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯಕ್ಕೆ ಸ್ಥಳೀಯ ಶಾಸಕ ಎಂ.ಪಿ ಅಪಚ್ಚು ರಂಜನ್ ದಿಢೀರ್ ಭೇಟಿ ನೀಡಿ ನೀರಿನ ವ್ಯವಸ್ಥೆ ಮತ್ತು ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.

ನೀರು ಸಂಗ್ರಹದ ಮಾಹಿತಿ ಕೇಂದ್ರಕ್ಕೆ ತೆರಳಿ ನೀರಿನ ಮಟ್ಟ ಮತ್ತು ಡ್ಯಾಂ ನ ಒಳ ಹಾಗು ಹೊರಹರಿವು, ನಾಲೆಗಳ ಮೂಲಕ ನೀರಿನ ಹರಿವಿನ ಬಗ್ಗೆ ಮಾಹಿತಿ ಪಡೆದರು.
ಮಳೆ ಆಧಾರದ ಮೇಲೆ ಮತ್ತು ನೀರಿನ ಸಮತೋಲನವನ್ನು ಕಾಪಾಡಿಕೊಂಡು ಹೆಚ್ಚುವರಿಯಾಗಿ ಬರುವ ನೀರನ್ನು ನದಿಗೆ ಹರಿಸುವಂತೆ ಸ್ಥಳದಲ್ಲಿದ್ದ ಎಂಜಿನಿಯರ್ ಸಿದ್ದರಾಜುರವರಿಗೆ ಸೂಚನೆ ನೀಡಿದ್ದಾರೆ.
ಈ ಸಂದರ್ಭ ಅಣೆಕಟ್ಟು ಭದ್ರತಾ ಪಡೆಯ ಪೊಲೀಸ್ ವೃತ್ತ ನಿರೀಕ್ಷಕ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಇದ್ದರು.

error: Content is protected !!