ಶಾಸಕರ ನೇತೃತ್ವದಲ್ಲಿ ನಿಯೋಗದ ಸಿ.ಎಂ ಭೇಟಿ

ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ ನೇತೃತ್ವದಲ್ಲಿ ವಿರಾಜಪೇಟೆ ಪಟ್ಟಣ ಪಂಚಾಯ್ತಿ ಪ್ರತಿನಿಧಿಗಳ ನಿಯೋಗ ಸಿ.ಎಂ ಭೇಟಿಯಾಗಿದ್ದಾರೆ.
ಬೆಳೆಯುತ್ತಿರುವ ವಿರಾಜಪೇಟೆ ಪಟ್ಟಣಕ್ಕೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಮನವಿ ಮಾಡಲಾಗಿದೆ. ವಿರಾಜಪೇಟೆ ಪಟ್ಟಣ ಅಭಿವೃದ್ಧಿಯ ಕುರಿತು ಮುಖ್ಯಮಂತ್ರಿಗಳಿಗೆ ಕೆ.ಜಿ ಬೋಪಯ್ಯರಿಂದ ಮಾಹಿತಿ ನೀಡಲಾಗಿದೆ. ಪ.ಪಂ ಅಧ್ಯಕ್ಷರು,ಸ್ಥಾಯಿ ಸಮಿತಿ ಸದಸ್ಯರು ಹಾಜರು ಇದ್ದರು.