ಮಾಸ್ಕ್ ಹಾಗೂ ಸಾಬೂನುಗಳ ವಿತರಣೆ

ಗೋಣಿಕೊಪ್ಪ: ಬಿಜೆಪಿ ಸರ್ಕಾರ ಸವಾಲಿನ ದಿನಗಳನ್ನು ಎದುರಿಸಿ ಏಳು ವರ್ಷಗಳನ್ನು ಪೂರೈಸಿ ಮುಂದಿನ ಹೆಜ್ಜೆ ಇಡುತ್ತಿರುವ ಹಿನ್ನೆಲೆ ಗೋಣಿಕೊಪ್ಪ ಶಕ್ತಿ ಕೇಂದ್ರದ ವತಿಯಿಂದ ಮಾಸ್ಕ್ ಹಾಗೂ ಸಾಬೂನುಗಳನ್ನು ವಿತರಿಸಿದರು.

ಶಕ್ತಿಕೇಂದ್ರದ ಪ್ರಮುಖ್ ಸುರೇಶ್ ರೈ ಅವರ ನೇತೃತ್ವದಲ್ಲಿ ಗೋಣಿಕೊಪ್ಪ ಪಟ್ಟಣದ ೪ನೇ ವಿಭಾಗದ ಮನೆಗಳಿಗೆ ತೆರಳಿ ಪ್ರತಿ ಕುಟುಂಬಗಳಿಗೆ ಮಾಸ್ಕ್ ಮತ್ತು ಸಾಬೂನುಗಳನ್ನು ನೀಡಲಾಯಿತು.
ಮೋದಿ ಸರ್ಕಾರ ಜನರ ಆರೋಗ್ಯದ ದೃಷ್ಟಿಯಿಂದ ಕೊರೋನ ದಿನಗಳನ್ನು ಬಹಳ ಸಮರ್ಪಕವಾಗಿ ನಿಭಾಯಿಸುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕಗಳನ್ನು ಧರಿಸಿ ಕೊರೋನ ಮಹಾಮಾರಿಯನ್ನು ಓಡಿಸಬೇಕಾಗಿದೆ. ಈ ಕಾರ್ಯವನ್ನು ಪ್ರತಿಯೊಬ್ಬರು ಮಾಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಬಲ ತುಂಬಬೇಕು ಎಂದು ಜಾಗೃತಿಯನ್ನು ಮೂಡಿಸಿದರು.

error: Content is protected !!