ಶಾಸಕರಿಂದ ಮನೆ ಮಂಜೂರಾತಿ ಪತ್ರ ವಿತರಣೆ

ಮಡಿಕೇರಿ ಆ.26:-ಮತ್ಸ್ಯಾಶ್ರಯ ಯೋಜನೆಯಡಿ ಅರ್ಹ ನಾಲ್ಕು ಫಲಾನುಭವಿಗಳಿಗೆ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶಾಸಕರ ಕಚೇರಿಯಲ್ಲಿ ಬುಧವಾರ ಮನೆ ಮಂಜೂರಾತಿ ಪತ್ರ ವಿತರಿಸಿದರು.
ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಕೆ.ಎಸ್.ದಿಕ್ಕಿ, ಕೋತೂರು ಗ್ರಾ.ಪಂ. ವ್ಯಾಪ್ತಿಯ ಎಂ.ಎಂ.ವಿಲಾಸಿನಿ, ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಎಂ.ಎ.ಗಣಪತಿ, ಗೋಣಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಎಚ್.ಆರ್.ಮಧು ಅವರಿಗೆ ಮನೆ ಮಂಜೂರಾತಿ ಆದೇಶ ಪತ್ರವನ್ನು ಶಾಸಕರು ವಿತರಿಸಿದರು. 2018-19 ನೇ ಸಾಲಿನ 12 ನೇ ಹಂತದ ಮತ್ಸ್ಯಾಶ್ರಯ ಯೋಜನೆಯಡಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 5 ಮನೆಗಳ ಮಂಜೂರಾತಿ ದೊರೆತಿದ್ದು, ಇವರಲ್ಲಿ ನಾಲ್ಕು ಮಂದಿಗೆ ಅನುಮೋದನೆ ದೊರೆತಿದ್ದು, ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮನೆ ಮಂಜೂರಾತಿ ಪತ್ರವನ್ನು ವಿತರಿಸಿದರು.