ಶಾಶ್ವತವಾಗಿ ಕದ ಮುಚ್ಚಿದ ‘ಶ್ರೀ ಟಾಕೀಸ್; ಈ ಬೆಳ್ಳಿತೆರೆಗೆ ಬಿತ್ತು ತೆರೆ!

ಕೊರೋನಾ ಕಾಟದಿಂದ ಚಿತ್ರಮಂದಿರಗಳು ಸುಮಾರು ಒಂದು ವರ್ಷದಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್‌ ಬಂದ ಮೇಲೆ ಚಿತ್ರಮಂದಿರಕ್ಕೆ ಬರುವ ಜನರ ಸಂಖ್ಯೆಯೂ ಕಡಿಮೆ ಆಗಿದೆ. ಒಂದೇ ಸ್ಕ್ರೀನ್‌ನಲ್ಲಿ ಸಿನಿಮಾ ಓಡಿಸಿ, ದೊಡ್ಡ ಮಟ್ಟದಲ್ಲಿ ಆದಾಯ ಪಡೆಯುತ್ತಿರುವುದು ಕಡಿಮೆ ಚಿತ್ರಮಂದಿರಗಳು.

ಪೈರಸಿ ವಿರುದ್ಧ ಹೊಸ ತಂತ್ರಜ್ಞಾನ;ಇನ್ನು ಮುಂದೆ ಚಿತ್ರಮಂದಿರಗಳಲ್ಲಿ ಕದ್ದು ಚಿತ್ರೀಕರಣ ಮಾಡಲಾಗದು!

ಒಂದು ಕಾಲದಲ್ಲಿ ಸಿಂಗಲ್ ಸ್ಕ್ರೀನ್‌ ‘ಶ್ರೀ ಟಾಕೀಸ್‌’ ಅಂದರೆ ಮೈಸೂರಿನಲ್ಲಿ ಅಲ್ವಾ? ಎಂದು ಜನರು ಕೇಳುತ್ತಿದ್ದರು. ಅಷ್ಟರ ಮಟ್ಟಿಗೆ ಹೆಸರು ಮಾಡಿದ ಟಾಕೀಸ್‌ ಈಗ ಶಾಶ್ವತವಾಗಿ ಬಾಗಿಲು ಹಾಕಿದೆ. ಸುಮಾರು 5 ದಶಕಗಳ ಹಳೆಯ ಈ ಚಿತ್ರಮಂದಿರಕ್ಕೆ ಕೊರೋನಾ ಲಾಕ್‌ಡೌನ್ ತೀವ್ರ ಸಂಕಷ್ಟ ನೀಡಿತ್ತು.

ಈ ಕಾರಣ ಚಿತ್ರಮಂದಿರವನ್ನೂ ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಮಾಲೀಕರು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.

ಮೈಸೂರಿನಲ್ಲಿ ಈಗಾಗಲೇ ವಿದ್ಯಾರಣ, ರತ್ನಾ, ಶಾಂತಲಾ, ಒಪೇರಾ, ರಣಜಿತ್, ಶಾಲೀಮಾರ್ ಚಿತ್ರಮಂದಿರಗಳು ಮುಚ್ಚಿವೆ. ಇದೀಗ ಶ್ರೀ ಟಾಕೀಸ್‌ ಮುಚ್ಚಿದ ಚಿತ್ರಮಂದಿರಗಳ ಪಟ್ಟಿಗೆ ಸೇರಿದೆ. ಬೆಂಗಳೂರಿನ ನಂತರ ಅತಿ ಹೆಚ್ಚು ಆದಾಯ ಪಡೆಯುತ್ತಿದ್ದದ್ದು ಮೈಸೂರಿನ ಚಿತ್ರಮಂದಿರಗಳು. ಒಂದೊಂದೇ ಸಾಲಾಗಿ ಬಾಗಿಲು ಮುಚ್ಚಿವೆ. ಸಿನಿ ಪ್ರೇಮಿಗಳ ಪರಿಸ್ಥಿತಿ ಏನು? ಸಿನಿಮಾ ಬಿಡುಗಡೆ ಮಾಡಲು ಮಲ್ಟಿಪ್ಲೆಕ್ಸ್‌ನೇ ಆಯ್ಕೆ ಮಾಡಿಕೊಳ್ಳುವ ದಿನ ದೂರದಲ್ಲಿಲ್ಲ. ಆದರೆ, ಈಗೀಗ ಬಹುತೇಕ ಸಿನಿಮಾಗಳು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿಯೇ ಬಿಡುಗಡೆಯಾಗುತ್ತಿವೆ. ಜನರೂ ಚಿತ್ರಮಂದಿರಗಳಿಗೆ ಹೋಗುವುದು ಸೇಫ್ ಎಂದು ಕೊಳ್ಳುತ್ತಿಲ್ಲ. ಆದ್ರದಿಂದ ಮಲ್ಟಿಪ್ಲೆಕ್ಸ್‌ಗಳಿಗೂ ಈ ಹೊಡೆತ ಬೀಳುತ್ತಿರುವುದು ಸುಳ್ಳಲ್ಲ.

‘ಕಪಾಲಿ ಚಿತ್ರಮಂದಿರದ ಮಾಲೀಕರ ನಿರ್ಲಕ್ಷ್ಯದಿಂದಲೇ ಕಟ್ಟಡ ಕುಸಿತ’

ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಮೈಸೂರಿನ ಸಿನಿ ಪ್ರೇಮಿಗಳು ಚಿತ್ರಮಂದಿರಗಳು ಒಂದಾದ ಮೇಲೊಂದು ಬಾಗಿಲು ಹಾಕುತ್ತಿರುವುದಕ್ಕೆ ಭಾವುಕರಾಗಿದ್ದಾರೆ. ತಮ್ಮ ಕಾಲೇಜು ದಿನಗಳು, ಹೆಂಡತಿ ಜೊತೆ ಮೊದಲ ಸಿನಿಮಾ ನೋಡಿದ ಕ್ಷಣ ಎಲ್ಲವನ್ನೂ ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

error: Content is protected !!