ಶಾಲಾ ಕಾಲೇಜು ಆರಂಭದ ಜೊತೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ

ಶಾಲಾ ಕಾಲೇಜು ಅರಂಭಕ್ಕೂ ಮುನ್ನ ಕೊವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಮಡಿಕೇರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕದ ವ್ಯವಸ್ಥಾಪಕರು ಮತ್ತು ಜಿಲ್ಲಾಡಳಿತ ಬಸ್ ಸಂಚಾರ ಪುನರ್ ಅರಂಭಿಸಲು ಮುಂದಾಗಲಿ ಕಾರ್ಮಾಡು , ನಿಟ್ಟೂರು, ಬಾಳೆಲೆ ಪೊನ್ನಪ್ಪಸಂತೆ ಕಿರುಗೂರು ಮಾಯಮೂಡಿ ಭಾಗಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸುಗಳನ್ನು ನಷ್ಟದ ನೆಪವೊಡ್ಡಿ ಕೊವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೋಳಿಸಲಾಗಿದೆ.

17ನೇ ತಾರೀಖು ಶಾಲಾ, ಕಾಲೇಜು ಗಳು ಅರಂಭಿಸಿರುವ ಬೆನ್ನ ಹಿಂದಯೇ ವಿದ್ಯಾರ್ಥಿಗಳು ದೂರದ ಕಾಲೇಜುಗಳಿಗೆ ಗ್ರಾಮಾಂತರ ಪ್ರದೇಶಗಳಿಂದ ಹೋಗಿ ಬರಲು ಸಾರಿಗೆ ವ್ಯವಸ್ಥೆಯತ್ತಲೂ ಗಮನ ಹರಿಸಬೇಕಿದೆ. ಸ್ಥಗಿತಗೊಂಡಿರುವ ರಸ್ತೆ ಸಾರಿಗೆ ನಿಗಮದ ಏಲ್ಲಾ ಬಸ್ಸುಗಳನ್ನು ವಾರದ ಎಲ್ಲಾ ದಿನಗಳಲ್ಲಿ ಸಂಚರಿಸುವಂತೆ ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಉಪಾಧ್ಯಕ್ಷರಾದ ಪಡಿಞರಂಡ ಕವಿತಾ, ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಮ್ಮುಣಿ , ನಾಸು ರಾಜು ಅಗ್ರಹಿಸಿದ್ದಾರೆ.

error: Content is protected !!