ಶಾಂತಿ ಸುವ್ಯವಸ್ಥೆ ಕಾಪಾಡಲು ಸಂತೆ ರದ್ದು: ಅನಿತಾ ಪೂವಯ್ಯ

ಮಡಿಕೇರಿ ವಾರದ ಸಂತೆ ಬಂದ್ ಇರುವ ಹಿನ್ನಲೆ ಶನಿವಾರಸಂತೆ, ಕೂಡ್ಲೂರು ಸಂತೆ ಸಹ ಬಂದ್ ಸಾಧ್ಯತೆ ಇದೆ.
ಸೆಕ್ಷನ್ 144 ಜಾರಿ ಇರುವ ಹಿನ್ನಲೆ ನಾಳೆ ಮಡಿಕೇರಿಯಲ್ಲಿ ವಾರದ ಸಂತೆ ಇರುವುದಿಲ್ಲ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಿಂದ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇದೇ ಸಂದರ್ಭ ಬೆಳಗಿನಿಂದಲೇ ಪೊಲೀಸ್ ತುಕಡಿ ಎಡಜಿಐಪಿ ಅಲೋಕ್ ಕುಮಾರ್, ಐಜಿ ಮಧುಕರ್ ಪವಾರ್,ಎಸ್ಪಿ ಎಂ .ಎ ಅಯ್ಯಪ್ಪರ ನೇತೃತ್ವದಲ್ಲಿ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ,ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶದಲ್ಲಿ ರೋಡ್ ಮಾರ್ಚ್ ನಡೆಸಿ, ಸಾರ್ವಜನಿಕರು ಆತಂಕ ಪಡದಂತೆ ಸಂದೇಶ ರವಾನಿಸಿದರು.