fbpx

“ಶಸ್ತ್ರ ತ್ಯೆಜಿಸಿದ್ದಾಗಲೂ ನಡೆದಿತ್ತು ದಾಳಿ” : ನಾಯಕ್.ಎ. ಡೇವಿಡ್ ಮನದಾಳ

ಅಂಕಣ: “ರಾಷ್ಟ ರಕ್ಷಕರು”

ಗಿರಿಧರ್ ಕೊಂಪುಳಿರ, ಅಂಕಣಕಾರರು ಹಾಗು ಪ್ರಧಾನ ವರದಿಗಾರರು

ರಾಷ್ಟ್ರ ರಕ್ಷಕರು ಅಂಕಣ ವಾರದ ಪ್ರತಿ ಭಾನುವಾರ ಮಾತ್ರವೇ ಪ್ರಕಟವಾಗುತ್ತಿತ್ತು. ಆದರೆ ಅಂಕಣಕ್ಕೆ ಬಂದ ಉತ್ತಮ ಪ್ರತಿಕ್ರಿಯೆಯಿಂದಾಗಿ ಇನ್ನು ಬುಧವಾರ ಕೂಡ ಅಂದರೆ‌ ವಾರದ ಎರಡು ದಿನಗಳು ಪ್ರಕಟವಾಗಲಿದೆ. ನಿಮ್ಮ ಕುಟುಂಬದಲ್ಲೂ ಮಾಜಿ ಯೋಧರಿದ್ದರೆ ಅವರ ಸಂಪೂರ್ಣ ಸೇನಾ ಬದುಕಿನ ಚಿತ್ರಣ ಕಟ್ಟಿಕೊಡಲಾಗುವುದು. ವಿವರಗಳೊಂದಿಗೆ ಸಂಪರ್ಕಿಸಿ

ಗಿರಿಧರ್ ಕೊಂಪುಳಿರ ಫೋಃ 9482981313


ಸೇನೆಯಲ್ಲಿದ್ದಾಗ ಸೈನಿಕ, ನಿವೃತ್ತಿ ಆಗಿ ಬರುತ್ತಿದ್ದಂತೆ ಎಕ್ಸ್ ಆರ್ಮಿ ಪಟ್ಟ ಹುತಾತ್ಮ ಆದ ಸಂದರ್ಭದಲ್ಲಿ ಇರುವ ಗೌರವ ನಿವೃತ್ತಿಯಾದ ನಂತರ ಇವರು ದೇಶಸೇವೆ ಮಾಡಿದ್ದರು ಎನ್ನುವುದಷ್ಟೆ ಆ ಸೈನಿಕನಿಗಾಗಲಿ,ಅವರ ಕುಟುಂಬಕ್ಕೆ ಹೆಮ್ಮೆ. ತನ್ನ ಸೇನೆಯಲ್ಲಿನ ಕೆಲವು ರೋಚಕತೆ ಚಿತ್ರಣ,ಬದುಕಿನ ಬಗ್ಗೆ ನಾಯಕ್ ಎ.ಡೇವಿಡ್ ರವರ ವಿವರ ಇಲ್ಲಿದೆ.


1963,ನವೆಂಬರ್ 7 ರಂದು ಸಿದ್ದಾಪುರ ಹೊರವಲಯದ ಮಾಲ್ದಾರೆ ಸಮೀಪದ ಗೆಟ್ಟೆಹಳ್ಳ ಎನ್ನುವಲ್ಲಿ ಏಳು ಮಕ್ಕಳ ಪೈಕಿ ಆರನೆಯವರಾಗಿ ಆರೋಗ್ಯ ಸ್ವಾಮಿ ಮತ್ತು ಅಂಥೋಣಿಯಮ್ಮರಿಗೆ
ಜನಿಸಿದರು ನಾಯಕ್.ಎ. ಡೇವಿಡ್ ದಿನನಿತ್ಯ ಹನ್ನೆರೆಡು ಕಿಲೋಮೀಟರ್ ನಷ್ಟು ಕಾಲ್ನಡಿಗೆ ಮೂಲಕ ಸಿದ್ದಾಪುರ ಶಾಲೆಗೆ ಬಡತನದಲ್ಲೂ ಶಿಕ್ಷಣ ಪಡೆದು 10ನೇ ತರಗತಿ ಇರುವಾಗಲೇ ಶಾಲೆ ಮೊಟಕುಗೊಳಿಸಿದರು.ಇತ್ತ ಏಳು ಮಕ್ಕಳು,ಪತ್ನಿ ಜೊತೆಗೆ ಮನೆ ನಿರ್ವಾಹಣೆ ಮಾಡಿಕೊಂಡಿದ್ದ ತಂದೆ ಆರೋಗ್ಯ ಸ್ವಾಮಿ ಸ್ಥಳೀಯ ಖಾಸಗಿ ಎಸ್ಟೇಟ್ ನಲ್ಲಿ ಕೆಲಸಕ್ಕೆ ಇದ್ದರು.ಇವರ ಸಂಬಳದಿಂದ ಕಷ್ಟದ ಬದುಕು ನಡೆಸಿಕೊಂಡಿದ್ದ ಕುಟುಂಬದಲ್ಲಿ ಗಂಡು ಮಕ್ಕಳಿದ್ದರೂ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು.ಅದೇ ಸಂದರ್ಭ 10ನೇ ತರಗತಿ ಮುಗಿಸಿ ಸಿದ್ದಾಪುರದ ಗ್ಯಾರೇಜೊಂದರಲ್ಲಿ ಮೆಕ್ಯಾನಿಕ್ ಕೆಲಸಕ್ಕೆ ಸೇರಿದ್ದರು. ಈ ಸಂದರ್ಭ ಬಂದಿತ್ತು ಸೇನಾ ನೇಮಕಾತಿ ನಡೆಯುವ ಬಗ್ಗೆ ಮಾಹಿತಿ.


ಸೇನಾ ಜರ್ನಿ: ಅಂದಿನ ಕಾಲದಲ್ಲಿ ದೇಶಸೇವೆ ಜೊತೆಗೆ ಕುಟುಂಬ ನಿರ್ವಹಣೆಗೆ ಇದ್ದ ಏಕೈಕ ಆಯ್ಕೆ ಅಂದರೆ ಅದು ಸೇನೆ. 1982 ರ ಮಾರ್ಚ್ ನಲ್ಲಿ ಮಡಿಕೇರಿಯಲ್ಲಿ ನಡೆದ ಸೇನಾ ನೇಮಕಾತಿಗೆ ಇವರ ಸ್ನೇಹಿತರ ಸಹಿತ ತೆರಳಿದರು,ಆಯ್ಕೆಯೂ ಆಯಿತು. ಬಳಿಕ ಇವರ ತರಬೇತಿ ನಡೆದದ್ದು ಊಟಿಯ ವೆಲ್ಲಿಂಗ್ಟನ್ ನಲ್ಲಿರುವ ಮದ್ರಾಸ್ ರೆಜಿಮೆಂಟ್ ಸೆಂಟರ್ [MRC] ನಲ್ಲಿ. 9 ತಿಂಗಳ ತರಬೇತಿ ನಂತರ ಮೊದಲು ನವದೆಹಲಿ 3 ವರ್ಷ ನಂತರ ಸೇನಾನೆಲೆಗೆ ಕಾಲಿಟ್ಟಿದ್ದು ನಾಗಲ್ಯಾಂಡ್ ನಲ್ಲಿ ಇಲ್ಲಿಯೂ ಮೂರು ವರ್ಷ ಸೇವೆ ಸಲ್ಲಿಸುತ್ತಿರುವಾಗ ಭಾರತೀಯ ಸೇನೆಗೆ ಬಂತು ಮಹತ್ವದ ಬುಲಾವ್.


ಸಿಂಹಳಿರ ನಾಡಿಗೆ ಹೊರಟಿತು ಬೆಟಾಲಿಯನ್: ಸಿಂಹಳಿಯರ ರಾಷ್ಟ್ರ ಶ್ರೀಲಂಕದಲ್ಲಿ ಭಾರತದ ತಮಿಳಗರಿಗೆ ಎಲ್ಲಿಲ್ಲದ ಕಿರುಕುಳ ನಡೆಯುತ್ತಿತ್ತು.ದೀಪಾವಳಿ ಸಂದರ್ಭ ಮಕ್ಕಳು ರಸ್ತೆಗಳಲ್ಲಿ ಪಟಾಕಿ ಸಿಡಿಸುವಂತೆ ಅಲ್ಲಿ ಬಾಂಬ್ ಸಿಡಿಯುತ್ತಿದ್ದವು ಇದಕ್ಕೆ ಕಾರಣವಾಗಿದ್ದದ್ದು ವೆಲ್ಲುಪಿಳೈ ಪ್ರಭಾಕರನ್ ನೇತೃತ್ವದ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಲಂ(LTTE) ಶ್ರೀಲಂಕದ ಕೆಲವು ಭಾಗವನ್ನು ತನ್ನ ವಶಕ್ಕೆ ಪಡೆಯಲು 1976ರಿಂದಲೇ ಹೋರಾಟವನ್ನು ಹಿಂಸಾತ್ಮಕವಾಗಿ ನಡೆಸುತ್ತಿತ್ತು.ಈ ದಾಳಿಗೆ ತತ್ತರಿಸಿದ್ದು ಅಲ್ಲಿ ನೆಲಸಿದ್ದ ಭಾರತೀಯ ತಮಿಳರು. ಇವರ ರಕ್ಷಣೆಗೆ ಭಾರತ ಸರ್ಕಾರದ ಅಂದಿನ ಪ್ರಧಾನಿ ದಿ.ರಾಜೀವ್ ಗಾಂಧಿ ಭಾರತೀಯ ಸೇನೆಯನ್ನು ಕಳುಹಿಸಲು ನಿರ್ಧರಿಸಿತ್ತು,ಒಂದಾದ ನಂತರ ಒಂದು ಬೆಟಾಲಿಯನ್ ಒಂದು ವರ್ಷಗಳ ಕಾಲ ಅಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು.ಹೀಗೆ 1988 ರಲ್ಲಿ ಹಡಗಿನ ಮೂಲಕ ಶ್ರೀಲಂಕಾ ತಲುಪುತ್ತಿದ್ದಂತೆ ಅಲ್ಲಿ ನಿಂತಿದ್ದ ಭಾರತೀಯ ಸೇನಾ ವಾಹನಗಳು,ಟ್ಯಾಂಕರ್ ಗಳನ್ನು ನೋಡಿ ಪರಿಸ್ಥಿತಿ ಅರ್ಥವಾಯಿತು,ಇದಾಗಿ ಒಂದೆರೆಡು ದಿನದಲ್ಲೆ ನಡೆದ ಭಾರೀ ತೀವ್ರತೆಯುಳ್ಳ ನೆಲಬಾಂಬ್ ಮಾರುಕಟ್ಟೆಯೊಂದರಲ್ಲಿ ಸ್ಪೋಟಗೊಂಡಿದ್ದು ಅದರಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದು ಇಂದಿಗೂ ಅವರಿಗೆ ಮರೆಯಲಾಗದೊಂದು ಕ್ಷಣ.ಇದರ ಜೊತೆಗೆ ಇವರ ಬೆಟಾಲಿಯನ್ ಮುಖ್ಯ ಕಮಾಂಡರ್ ಹತ್ಯೆ ಬೆಚ್ಚಿ ಬೀಳಿಸಿತ್ತು.ಮುಖ್ಯವಾಗಿ ಭಾರತೀಯ ಸೇನೆ, ಪಂಜಾಬಿಗಳಿರುವ ತಂಡದ ಮೇಲೆ ಇವರ ದಾಳಿ ನಡಿಯುತ್ತೇ ವಿನಃ ಉಳಿದ ಭಾರತೀಯ ಸೈನಿಕರಿಗೆ ಏನೂ ತೊಂದರೆ ನೀಡುತ್ತಿರಲಿಲ್ಲ.ಡೇವಿಡ್ ರವರ ತಂಡ ತಮ್ಮ ಸೇನಾ ತುಕಡಿಗಳು ತೆರಳುವ ಮಾರ್ಗ ಪರಿಶೀಲನಾ ಕಾರ್ಯ ನಡೆಸಬೇಕಾಗುತ್ತಿತ್ತು,ಇವರು ತೆರಳುವ ಮಾರ್ಗದಲ್ಲಿ ಪ್ಲಾಸ್ಟಿಕ್ ಬ್ಯಾರಲ್ ನಲ್ಲಿ ಸ್ಪೋಟಕ ಇಟ್ಟು ಮಣ್ಣಿನಲ್ಲಿ ಇರಿಸುತ್ತಿದ್ದರು.ಗ್ರಾಹಚಾರ ತಪ್ಪಿದ್ದಲ್ಲಿ ಇದರ ಮೇಲೆ ವಾಹನ ಹತ್ತಿದರೆ ಒಂದು ಬೆಟಾಲಿಯನ್ನು ನಿರ್ಣಾಮ ಮಾಡುವ ಸಾಮರ್ಥ್ಯ ಹೊಂದಿರುತ್ತಿತ್ತು.
1987ರಲ್ಲಿ ಭಾರತೀಯ ಶಾಂತಿ ಕಾಪಾಡುವ ತುಕಡಿ( IPKF) ಶ್ರೀಲಂಕಾದಲ್ಲಿ ನೆಲೆ ನಿಂತಿದ್ದು 1988 ರಿಂದ ಒಂದು ವರ್ಷ ಶ್ರಿಲಂಕಾದಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ವಾಪಸ್ಸಾದರು.


ಮತ್ತೆ ಭಾರತ ನೆಲದಲ್ಲಿ: ಶ್ರೀಲಂಕಾದಿಂದ ಭಾರತಕ್ಕೆ ಆಗಮಿಸಿದ ಡೇವಿಡ್ ರವರು ಡಾರ್ಜಿಲಿಂಗ್ ನಲ್ಲಿ ಮತ್ತೆ ಸೇವೆ ಆರಂಭಿಸಿದ್ದರು,ಇಲ್ಲಿನ ಸಿಕ್ಕಿಂ,ಗಾಂಗ್ಟಾಕ್ ಗಳಲ್ಲಿ ಮೂರು ವರ್ಷ ಸೇವೆ ಮುಗಿಸುತ್ತಿದ್ದಂತೆ ಜೇಷ್ಟತೆ ಆಧಾರದ ಮೇಲೆ 1995ರಲ್ಲಿ ಪುಣೆಗೆ ವರ್ಗಾವಣೆ (ERE) ಮಾಡಲಾಯಿತು ಕೆಲಕಾಲ ಸೇವೆ ಸಲ್ಲಿಸಿದ ಬಳಿಕ ಮತ್ತೆ ಪಾಕ್ ಗಡಿ ಯಲ್ಲಿ ROP Convey(ರಸ್ತೆ ಸುರಕ್ಷತೆ ಪರಿಶೀಲನೆ) ಮುಖ್ಯವಾಗಿ ಲ್ಯಾಂಡ್ ಮೈನ್,ಆಂಬುಷ್ ಪರಿಶೀಲನೆ,ಪಾಯಿಂಟ್,ರಾತ್ರಿ ಪಾಳಯದಲ್ಲಿ ಬಂಕರನಲ್ಲಿದ್ದುಕೊಂಡು ಸೇವೆ ಸಲ್ಲಿಸಬೇಕಾಗಿತ್ತು.ಡೆಲ್ಟಾ ಹೆಸರಿನ ಈ ತಂಡ ಗಡಿಯಲ್ಲಿ ಕಾಯುತ್ತಿದ್ದರೆ ಅತ್ತ ಪಾಕಿಗಳು ಸುಕಾಸುಮ್ಮನೆ ಭಾರತೀಯ ಗಡಿಯತ್ತ ಗುಂಡು ಹಾರಿಸುತ್ತಿದ್ದರು. ಗಡಿ ನುಸುಳುವಿಕೆ ಮತ್ತು ಉಗ್ರವಾದಿಗಳ ದಾಳಿ ನಡೆಸುವ ಕೆಲಸ ಒಂದಡೆಯಾದರೆ,ಬೇಹುಗಾರಿಕೆಯಿಂದ ಉಗ್ರರು ಗಡಿ ದಾಟಿ ಬಂದು ಗಡಿ ಅಂಚಿನ ಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾದರೆ ಆ ಗ್ರಾಮವನ್ನು ಸುತ್ತು ವರೆದು ಉಗ್ರರನ್ನು ಹಿಡಿಯುವ ಕೆಲಸ ಮಾಡಲಾಗುತ್ತಿತ್ತು.

ಕಾಶ್ಮೀರದ ದುಸ್ತರ ಬದುಕು: ಒಂದೆಡೆ ವಿರೋಧಿಗಳಿಂದ ಗುಂಡು,ಬಾಂಬ್ ದಾಳಿಗಳು ಇನ್ನೊಂದೆಡೆ ಕೊರೆಯುವ ಚಳಿ,ಕಣ್ಣೆದುರು ಆಹಾರವಿದ್ದರೆ ತಿನ್ನಲೂ ಆಗದಂತಹಾ ಪರಿಸ್ಥಿತಿ,ಮಂಜುಗೆಡ್ಡೆ ಕರಗಿಸಿ ಬಿಸಿ ಮಾಡಿ ಮೂರು ದಿನಕ್ಕೊಮ್ಮೆ ಸ್ನಾನ,ಕುಡಿಯುವ ನೀರಿಗೂ ಪರದಾಟ ಇರುತ್ತಿತ್ತು.

ಬಾರ್ಡರ್ ಸಿನಿಮಾ ನೋಡಲಿಲ್ಲ: ಡೇವಿಡ್ ರವರು ಸೇವೆಯಲ್ಲಿದ್ದ ಸಂದರ್ಭ ಬಿಡುಗಡೆಯಾದ ಹಿಂದಿ ಸಿನಿಮಾದ ಕಥೆ ಕೇಳಿಯೇ ಗಾಬರಿಗೊಂಡಿದ್ದ ಇವರ ಪತ್ನಿ ಸೋನಿ ಇದೇ ಕಾರಣಕ್ಕೆ ಇಂದಿಗೂ ಬಾರ್ಡರ್ ಸಿನಿಮಾ ವೀಕ್ಷಣೆ ಮಾಡಿಲ್ಲ ಎನ್ನುವುದೊಂದು ವಿಶೇಷ.ಇನ್ನು ಇಲ್ಲಿಂದ ಪತ್ರ ಬರೆದರೆ ಡೇವಿಡ್ ರವರ ಕೈಸೇರುತ್ತಿರಲ್ಲ ಕಾರಣ ಇವರು ಇದ್ದ ಪ್ರದೇಶಕ್ಕೆ ಪತ್ರಗಳು ಕಳುಹಿಸಲು ಸಾದ್ಯವಾಗದ ಕಾರಣ ಇವರ ಮೊದಲ ಮಗನ ಜನನ ಸಂದರ್ಭ ಟೆಲಿಗ್ರಾಂ ಕಳುಹಿಸಲಾಗಿತ್ತು. ಈ ಟೆಲಿಗ್ರಾಂ ಓದಿದವರು ಫಿಮೇಲ್ ಬೇಬಿ ಬಾರ್ನ್ ಎಂದು ತಪ್ಪಾಗಿ ಸಂದೇಶ ತಲುಪಿಸಿದ್ದರು,ರಜೆಯಲ್ಲಿ ಮನೆಗೆ ಬಂದಾಗಲೇ ಗೊತ್ತಾದದ್ದು ಹುಟ್ಟಿದ್ದು ಗಂಡು ,ಹೆಣ್ಣಲ್ಲ ಎಂದು.

ಅಂತಿಮ ಕ್ಷಣಗಳು: 1999ರಲ್ಲಿ ನಿವೃತ್ತಿ ಪಡೆದು ಒಂದು ಮಿನಿ ಪಾರ್ಟಿ ಮುಗಿಸಿ ಹೆಡ್ಕ್ವಾರಟರ್ ಕಡೆ ಹೊರಟಿದ್ದರು.ಸೇನಾ ನೆಲದಿಂದ ಅಲ್ಲಿಗೆ ತಲುಪಲು ಮೂರು ದಿನಗಳು ತೆಗೆದುಕೊಂಡಿತು,ಕಾರಣ ಪಾಪಿ ಪಾಕಿಗಳ ನಿರಂತರ ಅಪ್ರಚೋದಿತ ದಾಳಿ,ಹೀಗೆ ರಕ್ಷಿಸಿಕೊಳ್ಳಲು ಬಂಕರ್ ಒಳಗೆ ಕುಳಿತಿದ್ದ ಸಂದರ್ಭ ವೈರಿಗಳು ನಡಸಿದ ಶೆಲ್ ದಾಳಿಯಿಂದ ಬಂದ ಶೆಲ್ ಬಾಂಬ್ ಏಳು ಮಂದಿಯಿದ್ದ ಬಂಕರ್ ಒಳಗೆ ಬಿದ್ದಿತ್ತು,ಅದೃಷ್ಟವಶಾತ್ ಅದು ಅಲ್ಲಿ ಸಿಡಿಯಲಿಲ್ಲ,ತಕ್ಷಣವೇ ಪಕ್ಕದ ಬಂಕರ್ ಕಡೆ ದೌಡಾಯಿಸಿ ಜೀವ ಉಳಿಸಿಕೊಂಡರು ನಿವೃತ್ತಿಯಾಗಿ ನಿರಾಯುದ್ದರಾಗಿದ್ದರಾಗಿ ಹುಟ್ಟೂರಿಗೆ ಹೆಂಡತಿ ಮಕ್ಕಳ ನೋಡುವ ತವಕದಲ್ಲಿ ಇದ್ದ ಕೊನೆಯ ಕ್ಷಣದ ಘಟನೆ..
ಅದೃಷ್ಟವಶಾತ್ ಇದೀಗ ಹೆಂಡತಿ ಸೋನಿ ಪುತ್ರರಾದ ಕೆನಥ್ ಮತ್ತು ಕೆವಿನ್ ಕುಟುಂಬದ ಜೊತೆ ಚಿಕ್ಕತ್ತೂರಿನಲ್ಲಿ ನೆಲೆಸಿದ್ದಾರೆ.

ಗಿರಿಧರ್ ಕೊಂಪುಳಿರ, ಪ್ರಧಾನ ವರದಿಗಾರರು
error: Content is protected !!