fbpx

ಶಬರಿಮಲೈ ಯಾತ್ರೆಗೆ ಹೋಗುವವರಿಗೆ ಮಹತ್ವದ ಮಾಹಿತಿ

ತಿರುವನಂತಪುರಂ,ನ.2– ಶಬರಿಮಲೈ ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ನ.16ರಿಂದ ಆರಂಭವಾಗುವ ಹಬ್ಬದ ದಿನಗಳಲ್ಲಿ ಎಲ್ಲಾ ಭಕ್ತರನ್ನು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ ಎಂದು ತಿರುಬಂಕೂರು ದೇವಸ್ವಂ ಮಂಡಳಿ ತಿಳಿಸಿದೆ.

ವಾರದ ದಿನಗಳಲ್ಲಿ ದಿನಕ್ಕೆ 1,000 ಭಕ್ತರಿಗೆ ಮಾತ್ರ ದೇವಾಲಯಕ್ಕೆ ಅವಕಾಶವಿದ್ದು, ಶನಿವಾರ ಮತ್ತು ಭಾನುವಾರದಂದು 2,000 ಭಕ್ತರಿಗೆ ಪ್ರವೇಶ ಅವಕಾಶವನ್ನು ವಿಸ್ತರಿಸಲಾಗಿದೆ. ಮಂಡಲ-ಮಕರ, ವಿಲಕ್ಕು ಪೂಜ ದಿನಗಳಲ್ಲಿ 5,000 ಮಂದಿ ಭಕ್ತರಿಗೆ ದರ್ಶನದ ಅವಕಾಶವಿದೆ.

ಡಿಸೆಂಬರ್‍ನಲ್ಲಿ ಎಲ್ಲಾ ದಿನಗಳವರೆಗೆ ಕ್ಯೂ ಸ್ಲಾಟ್‍ಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ನವೆಂಬರ್ ಮತ್ತು ಜನವರಿಯಲ್ಲಿ ಕೆಲವು ದಿನಗಳವರೆಗೆ ಕೆಲವೇ ಸ್ಲಾಟ್‍ಗಳು ಲಭ್ಯವಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಕಳೆದ 24 ಗಂಟೆಗಳಲ್ಲಿ ಕೋವಿಡ್ -19 ನಕಾರಾತ್ಮಕ ಪ್ರಮಾಣಪತ್ರ ಮತ್ತು ವೈದ್ಯಕೀಯ ವಿಮಾ ಕಾರ್ಡ್ ಹೊಂದಿರಬೇಕು.

ವರ್ಚುವಲ್ ಕ್ಯೂನಲ್ಲಿ ನೋಂದಾಯಿಸದ ಯಾವುದೇ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಈ ಬಾರಿ ಪಂಬಾ ನದಿಯಲ್ಲಿ ಸಾಂಪ್ರದಾಯಿಕ ಪವಿತ್ರ ಸ್ನಾನ ಮಾಡಲು ಸನ್ನಿಧಂ ಅಥವಾ ಪಂಬಾದಲ್ಲಿ ಉಳಿಯಲು ಭಕ್ತರಿಗೆ ಅವಕಾಶ ಇಲ್ಲ. ಅವಕಾಶವಿಲ್ಲ. ಪಂಬಾದಲ್ಲಿ ವಿಶೇಷ ಸ್ನಾನವನ್ನು ವ್ಯವಸ್ಥೆಗೆ ಚಿಂತನೆ ನಡೆಸಿದ್ದು, ನೀಲಕ್ಕಲ್‍ನಲ್ಲಿ ಸೀಮಿತ ವ್ಯವಸ್ಥೆ ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ.

ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗಿದ್ದು, ಸನ್ನಿಧಂನಲ್ಲಿ ತುಪ್ಪ ಅಭಿಷೇಕಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಲಘು ಮೋಟಾರು ವಾಹನಗಳನ್ನು ಪಂಬಾದಲ್ಲಿ ನಿಲ್ಲಿಸಲು ಅನುಮತಿಸಲಾಗುವುದು. ವಾಹನ ನಿಲುಗಡೆಗೆ ನೀಲಕ್ಕಲ್‍ಗೆ ಹಿಂತಿರುಗಬೇಕಾಗಿದೆ ಎಂದು ಮಂಡಳಿ ತಿಳಿಸಿದೆ.

error: Content is protected !!