ಶಬರಿಮಲೆ ತಾತ್ಕಾಲಿಕ ಓಪನ್

ಶಬರಿಮಲೆ: ತುಲಾ ಮಾಸ ಸಂಬಂಧ,ಕೇರಳದ ಪ್ರಸಿದ್ದ ಭಕ್ತರ ಕ್ಷೇತ್ರ ಮಣಿಕಂಟನ ಸನ್ನಿಧಿ ಅಕ್ಟೋಬರ್ 16 ರಂದು ಬಾಗಿಲು ತೆರೆಯಲಿದ್ದು,ಮರುದಿನ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 21ರ ವರೆಗೆ ಭಕ್ತರಿಗೆ ಅವಕಾಶವಿದ್ದು ಮತ್ತೆ ದೇವಾಲಯ ಮಚ್ಚಲ್ಪಡುತ್ತದೆ. ಈಗಾಗಲೇ ವರ್ಚುವಲ್ ಬುಕ್ಕಿಂಗ್ ಸೇವೆ ಆರಂಭವಾಗಿದ್ದು ಮೂದಲು ಬಂದವರಿಗೆ ಆದ್ಯತೆ ಎನ್ನುವಂತೆ ದಿನಕ್ಕೆ 250 ಮಂದಿಗೆ ಮಾತ್ರ ಪ್ರವೇಶ ಮತ್ತು ಪಂಪಾ ನದಿಯಲ್ಲಿ ಭಕ್ತರ ಪವಿತ್ರ ಸ್ನಾನಕ್ಕೆ ಅವಕಾಶವಿಲ್ಲ, ದರ್ಶನಕ್ಕೆ ಎರಡು ಗಂಟೆ ಮುಂಚಿತವಾಗಿ ಬುಕ್ಕಿಂಗ್ ಮಾಡಿದ ಭಕ್ತರು ಪಂಪಾ ತಲುಪಬೇಕಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.