ಶಬರಿಮಲೆ ಕ್ಷೇತ್ರಕ್ಕೆ ಸಂಬಂಧ ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನಿರ್ಭಂದ ಸಂಬಂಧ ಸಾಕಷ್ಟು ವಿವಾದ ಗಳು ಇದ್ದ ಬೆನ್ನಲ್ಲೇ ಇತ್ತೀಚೆಗೆ ಕ್ಷೇತ್ರಕ್ಕೆ ತರಳುವ ಮಾಲಾಧಾರಿಗಳಿಗೆ ಲಸಿಕೆ ಕಡ್ಡಾಯಗೊಳಿಸಿ ಜೊತೆಗೆ ಪುಟ್ಟ ಮಕ್ಕಳಿಗೆ ಕ್ಷೇತ್ರ ಪ್ರವೇಶಿಸಲು ಕೇರಳ ಸರ್ಕಾರ ಅನುಮತಿ ನೀಡಿತ್ತು,ಇದನ್ನು ಗಮನಿಸಿದ 9 ವರ್ಷದ ಬಾಲಕಿ ತನಗೆ ತನ್ನ ತಂದೆಯೊಡನೆ ಕ್ಷೇತ್ರಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಳು.ಕಾರಣ ಕ್ಷೇತ್ರಕ್ಕೆ 10 ವರ್ಷ ಮೇಲ್ಪಟ್ಟ ಬಾಲಕೀಯರಿಗೆ ದೇವಾಲಯಕ್ಕೆ ಪ್ರವೇಶವಿಲ್ಲದಿರುವುದರಿಂದ,ಹೈಕೋರ್ಟ್ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ,ಮುಂದಿನ 40 ವರ್ಷಗಳ ಕಾಲ ಬಾಲಕಿಗೆ ಕ್ಷೇತ್ರಕ್ಕೆ ಪ್ರವೇಶಿಸಲು ಸಾಧ್ಯವಿಲ್ಲದ ಕಾರಣ ಸದ್ಯ 9 ವರ್ಷದವಳಾಗಿರುವ ಹಿನ್ನಲೆಯಲ್ಲಿ ಆಗಸ್ಟ್ 23 ರ ಒಳಗಾಗಿ ತನ್ನ ತಂದೆಯೊಂದಿಗೆ ತೆರಳಲು ಅನುಮತಿ ನೀಡಿದೆ.