ವ್ಯಾಘ್ರಗಳ ಕಾಳಗ: ಒಂದು ಸಾವು

ಮೈಸೂರು: ನಾಗರಹೊಳೆ ಅಭಯಾರಣ್ಯದ ಕಾಕನಕೋಟೆಯ ಬಳ್ಳಕೆರೆಯಲ್ಲಿ ಹುಲಿಗಳ ನಡುವೆ ಕಾದಾಟ ನಡೆದಿದ್ದು,ಒಂದು ಹುಲಿ ಮೃತಪಟ್ಪಿದೆ.ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂಧಿಗಳಿಗೆ ಹುಲಿಯ ಕಳೆಬರ ಕಂಡು ಬಂದಿದ್ದು,ಕಾಳಗದ ವೇಳೆ ಹೃದಯಾಘಾತದಿಂದ ಹುಲಿ ಸತ್ತಿರಬಹುದು ಎನ್ನಲಾಡಿದೆ.ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಇತರೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸ್ಥಳದಲ್ಲೇ ಪಶುವೈಧ್ಯಾಧಿಕಾರಿ ಮುಜೀಬ್ ರಹಮನ್ ಮರಣೋತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

error: Content is protected !!