ವೋಟ್ ಮಾಡಿದ ಬ್ಯಾಲೇಟ್ ಪೇಪರಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಭೂಪ !

ಕಲ್ಬುರ್ಗಿ: ಮತದಾನದ ಗೌಪ್ಯತೆಯನ್ನು ಕಾಪಾಡಬೇಕಾಗಿದ್ದ ಭೂಪನೊಬ್ಬ ತಾನು ಮತದಾನ ಮಾಡಿದ ಬ್ಯಾಲೆಟ್ ಪೇಪರಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ನಡೆದಿದೆ. ಮತಗಟ್ಟೆಯ ಒಳಗೆ ಮೊಬೈಲನ್ನು ಕೊಂಡೊಯ್ಯುವಂತಿಲ್ಲ. ಆದರೆ ಈ ಮತದಾರ ಅದೇಗೋ ಕರ್ತವ್ಯನಿರತ ಚುನಾವಣಾಧಿಕಾರಿಗಳ ಕಣ್ತಪ್ಪಿಸಿ ಮೊಬೈಲ್ ಅನ್ನು ಮತಗಟ್ಟೆಯ ಒಳಗೆ ತೆಗೆದುಕೊಂಡು ಹೋಗಿದ್ದಾನೆ. ಬ್ಯಾಲೇಟ್ ಪೇಪರ್ ನಲ್ಲಿ ತಾನು ಮತ ಚಲಾಯಿಸಬೇಕಾಗಿದ್ದ ಅಭ್ಯರ್ಥಿಯ ಚಿಹ್ನೆಗೆ ಮುದ್ರೆ ಒತ್ತಿದ್ದಾನೆ. ನಂತರ ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಹೀಗಾಗಿ, ಮತ ಚಲಾವಣೆಗೊಂಡ ಬ್ಯಾಲೇಟ್ ಪೇಪರ್ ಬಹಿರಂಗಗೊಂಡಿರುವುದರಿಂದ ಈತ ಚಲಾಯಿಸಿದ ಮತ “ಕುಲಗೆಡುತ್ತದೋ” ಅಥವಾ ಇಲ್ಲವೋ ಎಂಬುವುದನ್ನು ಕಾದುನೋಡಬೇಕಿದೆ.
ಅಂದಹಾಗೆ, ಈ ಘಟನೆ ನಡೆದಿದರುವುದು ಕಲಬರುಗಿ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಬಗಾ (ಬಿ) ಗ್ರಾಮದ ಮತಗಟ್ಟೆಯೊಂದರಲ್ಲಿ.

error: Content is protected !!