ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಆಚರಣೆ


ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ಬೋಧಕ ಕೊಠಡಿಯಲ್ಲಿ ಇಂದು ಬೆಳಗ್ಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ . ಮಂಜುನಾಥ ಎಸ್. ರವರ ಅಧ್ಯಕ್ಷತೆಯಲ್ಲಿ, ಹಾಗು ಶುಶ್ರೂಷಕ ಅಧೀಕ್ಷಕರಾದ ಶ್ರೀಮತಿ ವೀಣಾ ಅವರ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಮಾರಂಭಕ್ಕೆ ಪ್ರಾಂಶುಪಾಲರು ಹಾಗು ಜಿಲ್ಲಾ ಶಾಸ್ತ್ರಚಿಕಿತ್ಸಕರಾದ ಡಾ. ವಿಶಾಲ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದು, ಮಹಿಳಾ ಸಾಧಕರ ಬಗ್ಗೆ ಮಾತನಾಡಿದರು. ಡಾ. ಮಂಜುನಾಥರವರು ಜೀವನದಲ್ಲಿ ಮಹಿಳೆಯರ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಹಿರಿಯ ಮಹಿಳೆಯರಿಗೆ ಶುಶ್ರೂಷಕರಿಗೆ ಹಾಗೂ ಗ್ರೂಪ್ ಡಿ ಸಿಬ್ಬಂದಿಗಳಿಗೆ ಶಾಲು ಹಾಗು ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿವಿಧ ವಿಭಾಗಗಳ ಇನ್ನೂರಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಪ್ರಸೂತಿ ಮತ್ತು ಸ್ತ್ರೀ ವಿಭಾಗದ ಹಿರಿಯ ಸ್ಥಾನೀಯ ವೈದ್ಯರಾದ ಡಾ. ಪವನ್ರವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಮುಖ್ಯ ಅತಿಥಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶುಶ್ರೂಷಕ ಅಧಿಕಾರಿಗಳಾದ ಶ್ರೀಮತಿ ಚಿತ್ರರವರು ಪ್ರಾರ್ಥನೆಯನ್ನು ಮಾಡಿದರು. ಪ್ರಸೂತಿ ಮತ್ತು ಸ್ತ್ರೀ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸೌಮ್ಯ ರವರು ಸ್ವಾಗತವನ್ನು ಕೋರಿದರು. ಶುಶ್ರೂಷಕ ಅಧೀಕ್ಷಕರಾದ ಶ್ರೀಮತಿ ವೀಣಾರವರು ಧನ್ಯವಾದವನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವು ಮುಕ್ತಾಯವಾಯಿತು.

error: Content is protected !!