ವೈದ್ಯಕೀಯ ದಾಖಲಾತಿಗಳ ಕಾನೂನು ಅಂಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು

ದಿನಾಂಕ ನಿನ್ನೆ ಅಪರಾಹ್ನ ೦೨:೦೦ಗಂಟೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ನಡೆಸಲಾಯಿತು.

ವೈದ್ಯಕೀಯ ದಾಖಲಾತಿಗಳ ಕಾನೂನು ಅಂಶಗಳು ವೈದ್ಯಕೀಯ ಅಭ್ಯಾಸಕ್ಕೆ ಸಂಬಂಧಿಸಿದ ಕಾನೂನು ಅಂಶಗಳ ಬಗ್ಗೆ ಸಂಸ್ಥೆಯ ಯುವ ವೈದ್ಯರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಡಾ. ಪ್ರೇರಣಾರವರ ಪ್ರಾರ್ಥನೆಯ ಮೂಲಕ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಡಾ. ವಿಶಾಲ್ ಕುಮಾರ್, ಪ್ರಾಂಶುಪಾಲರು ಹಾಗೂ ಜಿಲ್ಲಾ ಶಸ್ತçಚಿಕಿತ್ಸಕರು, ಇವರು ಕ್ಲಿನಿಕಲ್ ಅಭ್ಯಾಸದಲ್ಲಿ ಕಾನೂನು ಅಂಶಗಳನ್ನು ತಿಳಿದುಕೊಳ್ಳುವ ಮಹತ್ವದ ಬಗ್ಗೆ ತಿಳಿಸಿದರು. ಡಾ. ಮಂಜುನಾಥ್ ಎಸ್, ವೈದ್ಯಕೀಯ ಅಧೀಕ್ಷಕರು, ಇವರು ತಮ್ಮ ಸೇವಾನುಭವದಲ್ಲಿನ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ಮತ್ತು ಕಾನೂನು ತೊಡಕುಗಳು ಒಬ್ಬರ ವೃತ್ತಿಜೀವನದಲ್ಲಿ ಹೇಗೆ ತೊಂದರೆ ಉಂಟುಮಾಡಬಹುದು ಎಂಬುದನ್ನು ಯುವ ವೈದ್ಯರಿಗೆ ಮನದಟ್ಟು ಮಾಡಿದರು.

ಡಾ. ಬಿ ಜಿ ಪೊನ್ನಪ್ಪ, ಜನರಲ್ ಸರ್ಜನ್ ಮೈಸೂರು, ಇವರು ವೈದ್ಯಕೀಯ ದಾಖಲಾತಿಗಳ ಪ್ರಾಮುಖ್ಯತೆಯನ್ನು ತಿಳಿಸಿದರು. ವೈದ್ಯರುಗಳು ಮಾಡುವ ಸಾಮಾನ್ಯ ತಪ್ಪುಗಳನ್ನು ಕುರಿತು ವಿವರಿಸುವುದರ ಜೊತೆಗೆ ಅವರುಗಳ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿದರು. “ಕಾನೂನು ಎಲ್ಲಾ ಪ್ರಕರಣಗಳಲ್ಲಿ ಪುರಾವೆಗಳನ್ನು ಕೇಳುತ್ತದೆ. ಹಾಗಾಗಿ ನೀವು ನಡೆಸಿರುವ ಪ್ರತಿಯೊಂದು ಚಿಕಿತ್ಸಾ ವಿವರಗಳನ್ನು ಕೇಸ್ ಶೀಟ್‌ನಲ್ಲಿ ಲಿಖಿತವಾಗಿ ದಾಖಲಿಸಿ” ಎಂದು ತಿಳಿ ಹೇಳಿದರು. ಯುವ ವೈದ್ಯರುಗಳಾಗಿ ಹೊರಬರುತ್ತಿರುವ ಎಲ್ಲಾ ಗೃಹ ವೈದ್ಯರುಗಳಿಗೆ ಸೆಕ್ಷನ್ ೩೪೦ ‘ಎ’ ಬಗ್ಗೆ ಮಾಹಿತಿ ನೀಡಿದರು.

ಶ್ರೀ ಸುಬ್ರಮಣಿ ಎನ್, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಡಗು, ಇವರು ಯಾವ ಪ್ರಕರಣಗಳನ್ನು ಎಮ್.ಎಲ್.ಸಿ ಆಗಿ ಪೊಲೀಸರಿಗೆ ತಿಳಿಸಬೇಕೆಂಬುವುದರ ಬಗ್ಗೆ ಮಾತನಾಡಿದರು. ಎಮ್.ಎಲ್.ಸಿ ಎಂಬ ವಿಷಯದ ಕುರಿತು ಹಾಗೂ ಎಮ್.ಎಲ್.ಸಿ ಮಾಡುವ ವಿಧಾನದ ಕುರಿತು ವಿಸ್ತçೃತವಾಗಿ ಚರ್ಚಿಸಿದರು. ಆಸ್ಪತ್ರೆಗೆ ದಾಖಲಾಗುವ ಮೃತ ದೇಹಗಳನ್ನು ಪೊಲೀಸರಿಗೆ ಒಪ್ಪಿಸಿ ಎಮ್.ಎಲ್.ಸಿ ಆಗಿ ಪರಿವರ್ತಿಸಬೇಕೆಂದು ತಿಳಿಸಿದರು.

ಶ್ರೀ ನಿರಂಜನ್ ಎಮ್, ಎ, ಹಿರಿಯ ವಕೀಲರು ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಆಡಳಿತ ಮಂಡಳಿ ಸದಸ್ಯರು, ಇವರು ಯುವ ವೈದ್ಯರುಗಳಿಗೆ ಯಾವುದೇ ಹೆದÀರಿಕೆ ಇಲ್ಲದೇ ಧೈರ್ಯವಾಗಿ ಚಿಕಿತ್ಸೆಯನ್ನು ನೀಡಿ ಎಂದು ಆತ್ಮ ವಿಶ್ವಾಸವನ್ನು ಹೆಚ್ಚಿಸಿದರು. “ಜ್ಞಾನ ಮತ್ತು ಕರ್ತವ್ಯ ನಿಷ್ಠೆಯಿಂದ ನೀವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದಲ್ಲಿ ಹೆದರುವ ಅವಶ್ಯಕತೆ ಇಲ್ಲ” ಎಂದು ಹೇಳಿ ಕೆಲವು ಘಟನೆಗಳ ಮಾದರಿಯನ್ನು ನೀಡಿ ಧೈರ್ಯ ನೀಡುವುದರ ಜೊತೆಗೆ ಕರ್ತವ್ಯವನ್ನು ನಿರ್ವಹಿಸಿ ಎಂದು ಸಲಹೆ ನೀಡಿದರು.
ಶ್ರೀ ಗಜೇಂದ್ರ ಪ್ರಸಾದ್ ಜಿ. ಎಸ್. ಡಿವೈಎಸ್ಪಿ, ಮಡಿಕೇರಿ ಉಪವಿಭಾಗ, ಇವರು ವೈದ್ಯರುಗಳು ಹಾಗೂ ಪೊಲೀಸರಿಗೆ ಇರುವ ಅವಿನಾಭಾವ ಸಂಬAಧದ ಕುರಿತು ತಿಳಿಸುತ್ತಾ ಎಲ್ಲಾ ವೈದ್ಯರುಗಳು ಹಾಗೂ ಪೊಲೀಸರು ತಮ್ಮಲ್ಲಿರುವ ಲೋಪಗಳನ್ನು ಸರಿಪಡಿಸಿಕೊಂಡು ಕರ್ತವ್ಯ ನಿಷ್ಠೆಯಿಂದ ಜವಬ್ದಾರಿಯುತವಾಗಿ ಶ್ರದ್ಧೆಯಿಟ್ಟು ಕೆಲಸ ಮಾಡಿದಲ್ಲಿ ಭಯ ಪಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು. ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಂದು ಅಪಘಾತ, ಮೃತ ದೇಹ, ವಿಷಗ್ರಸ್ತ ರೋಗಿಗಳ ಪ್ರಕರಣಗಳನ್ನು ಎಮ್.ಎಲ್.ಸಿ ಮಾಡಿ ಪೊಲೀಸರಿಗೆ ತಿಳಿಸಿ ಹಾಗೂ ಕೇಸ್ ಶೀಟ್ ನಲ್ಲಿ ಪ್ರತಿಯೊಂದು ವಿವರಗಳನ್ನು ಲಿಖಿತವಾಗಿ ದಾಖಲಿಸಿ ಎಂದು ಮನದಟ್ಟು ಮಾಡಿದರು.
ನಂತರ ಪ್ರಶ್ನಾವಳಿ ಭಾಗವನ್ನು ನಡೆಸಲಾಯಿತು. ವೈದ್ಯರುಗಳು ತಮಗೆ ಇರುವ ಸಂಶಯಗಳನ್ನು ಲಿಖಿತ ರೂಪದಲ್ಲಿ ನೀಡಿದ್ದರು. ಸಭೆಯಲ್ಲಿದ್ದ ಗಣ್ಯರು ವೈದ್ಯರುಗಳಲ್ಲಿ ಇದ್ದ ಸಂಶಯಗಳಿಗೆ ಉತ್ತರಿಸುತ್ತಾ ವಿವರಣೆ ನೀಡಿದರು.

ಕಾರ್ಯಕ್ರಮವನ್ನು ಡಾಉಮೇಶ್ ಬಾಬು, ಸಂಘಟನಾ ಕಾರ್ಯದರ್ಶಿ, ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ನ್ಯಾಯಶಾಸ್ತç ವಿಭಾಗ, ಇವರು ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು. ಡಾ ವಿಶಾಲ್ ಕುಮಾರ್, ಪ್ರಾಂಶುಪಾಲರು ಹಾಗೂ ಜಿಲ್ಲಾ ಶಸ್ತçಚಿಕಿತ್ಸಕರು ಡಾ ಮಂಜುನಾಥ್ ಎಸ್, ವೈದ್ಯಕೀಯ ಅಧೀಕ್ಷಕರು, ಸಂಘಟನಾ ಆಧ್ಯಕ್ಷರು, ಡಾ ಬಿ ಜಿ ಪೊನ್ನಪ್ಪ, ಜನರಲ್ ಸರ್ಜನ್ ಮೈಸೂರು, ಶ್ರೀ ಸುಬ್ರಮಣಿ ಎನ್, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಡಗು, ಶ್ರೀ ನಿರಂಜನ್ ಎಮ್, ಎ, ಹಿರಿಯ ವಕೀಲರು ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಆಡಳಿತ ಮಂಡಳಿ ಸದಸ್ಯರು, ಶ್ರೀ ಗಜೇಂದ್ರ ಪ್ರಸಾದ್ ಜಿ. ಎಸ್. ಡಿ.ವೈ.ಎಸ್ಪಿ, ಮಡಿಕೇರಿ ಉಪವಿಭಾಗ, ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಡಾ ಶ್ವೇತಾ ಸಹ- ಸಂಘಟನಾ ಕಾರ್ಯದರ್ಶಿ, ಇವರು ಸಭೆಯಲ್ಲಿ ನೆರೆದಿದ್ದ ಎಲ್ಲಾ ಗಣ್ಯರುಗಳಿಗೆ ಗೃಹ ವೈದ್ಯರುಗಳಿಗೆ, ಬೋಧಕ ವರ್ಗದವರಿಗೆ, ವೈದ್ಯರುಗಳಿಗೆ ಕಾರ್ಯಕ್ರಮ ಆಯೋಜಿಸಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

error: Content is protected !!