ವೃದ್ಧನ ರಕ್ಷಣೆ

ಕೊಡಗು: ಆಕಸ್ಮಿಕವಾಗಿ ಕೆರೆಗೆ ಬಿದ್ದ ವೃದ್ದನೋರ್ವನ್ನು ಸಮಯ ಪ್ರಜ್ಞೆಯಿಂದ ತಂದೆ ಮಗ ಹರಸಾಹಸ ಪಟ್ಟು ರಕ್ಷಣೆ ಮಾಡಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಗಣಗೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಣಗೂರು ಗ್ರಾಮದಲ್ಲಿ ನಡೆದಿದೆ. ತಮ್ಮ ಹೊಲದ ಕೆಲಸದ ನಿಮ್ಮಿತ್ತ ಕಾರಿನಲ್ಲಿ ತೆರುತ್ತಿದ್ದ ಸಂದರ್ಭ ಸುಮಾರು 85 ವರ್ಷದ ವ್ಯಕ್ತಿಯೊಬ್ಬರು ಉಂಜಿನಳ್ಳಿಯ
ಕೆರೆಯಲ್ಲಿ ಮುಳುಗುತ್ತಿರುವುದನ್ನು ಗಮನಿಸಿ ಶಮಂತ್ ನೀರಿಗೆ ಹಾರಿದ್ದು ಬಳಿಕ ಇವರ ತಂದೆ ಕಾಕೇರ ರಮೇಶ್ ಸಾಥ್ ನೀಡಿ ವೃದ್ದನಿಗೆ ಜೀವಧಾನ ನೀಡಿದ್ದಾರೆ.