ವೃದ್ಧನಿಗೆ ಆಶ್ರಯ

ನಗರದ ವಿಜಯ ಬ್ಯಾಂಕ್ ಹತ್ತಿರ ಭಿಕ್ಷಾಟನೆ ಮಾಡುತಿದ್ದ ಹಿರಿಯ ನಾಗರಿಕರೊಬ್ಬರನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್. ಸುಬ್ರಮಣ್ಯ ಅವರು ಗುರುವಾರ ಗಮನಿಸಿ ಹಿರಿಯ ನಾಗರಿಕರ ಸಹಾಯವಾಣಿ 14567 ಗೆ ಕರೆ ಮಾಡಿ, ಮಾಹಿತಿ ನೀಡಿ, ನಗರದ ಶಕ್ತಿ ವೃದ್ದಾಶ್ರಮಕ್ಕೆ ಸೇರಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಪೊಲೀಸ್ ಇಲಾಖೆಯವರ ಸಹಕಾರದಲ್ಲಿ ಶಕ್ತಿ ವೃದ್ದಾಶ್ರಮಕ್ಕೆ ಸೇರಿಸಲಾಯಿತು.

error: Content is protected !!